ನಾಲ್ಕನೇ ಸಂಚಿಕೆಯೊಂದಿಗೆ ನಿಮ್ಮೆದುರಿಗಿದ್ದೇವೆಪ್ರಕಟಣೆ (೨೦-೦೪-೨೦೦೯):
ಈ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿರುವ , ರಂಗಭೂಮಿಯಲ್ಲಿ ಅರವತ್ತು ಸಂವತ್ಸರ ಕಂಡಿರುವ ಉಮೇಶ್ ಅವರ ಪುಟ್ಟ ಸಂದರ್ಶನವಿದೆ. ಹಿಂದೆ ರೂಪತಾರಾದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದ ಅವರ ಆತ್ಮ ಚರಿತ್ರೆ ಬಣ್ಣದ ಘಂಟೆ ಯನ್ನು ಸಂವಾದದಲ್ಲಿ ಪ್ರಕಟಿಸಲು ಅವರು ಅನುಮತಿ ನೀಡಿದ್ದಾರೆ. ಅವರಿಗೆ ಸಂವಾದ ತಂಡ ಚಿರಋಣಿ. ಮುಂಬರುವ ಸಂಚಿಕೆಗಳಲ್ಲಿ ನೀವದನ್ನ ಓದಲಿದ್ದೀರಿ. ಕಥಾ ಸಂಗಮದ ತಿಮ್ಮರಾಯಿ ಪಾತ್ರದಿಂದ ವೆಂಕಟ ಇನ್ ಸಂಕಟದ ಬೋಡಜ್ಜಿಯ ಪಾತ್ರದವರೆಗೂ ಕೆಲವು ನೆನಪಿನಲ್ಲುಳಿಯುವ ಅಭಿನಯ ಕೊಟ್ಟಿದ್ದಾರೆ, ಉಮೇಶ್. ಗೋಲ್ ಮಾಲ್ ರಾಧಾಕೃಷ್ಣ ದ ’ಬೇಜಾರ್ ಮಾಡ್ಕೋಬೇಡಿ’ ಪಾತ್ರ ಇಂದಿಗೂ ಜನಪ್ರಿಯ. ************* ಪರಿಚಿತ ರಂಗಭೂಮಿಯ ವಿಮರ್ಶಕರಾದ ಶಶಿಕಾಂತ ಯಡೆಹಳ್ಳಿ ತಾವು ಸಂಪಾದಿಸುತ್ತಿರುವ ರಂಗಭೂಮಿ ಪತ್ರಿಕೆಯ ಲೇಖನ, ವಿಮರ್ಶೆ ಗಳನ್ನು ಬಳಸಿಕೊಳ್ಳಲು ಸಂವಾದಕ್ಕೆ ಅನುಮತಿ ನೀಡಿದ್ದಾರೆ. ಥಿಯೇಟರ್ ಮಿರರ್ ಪತ್ರಿಕೆಯ ಹಾಲ್ಕುರಿಕೆ ಶಿವಶಂಕರ್ ಕೂಡ ತಮ್ಮ ಪತ್ರಿಕೆಯ ಲೇಖನಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ಈ ಎರಡೂ ಪತ್ರಿಕೆಯ ವೈವಿಧ್ಯಮಯ ಲೇಖನಗಳು ಸಂವಾದವನ್ನು ಶ್ರೀಮಂತವಾಗಿಸಲಿವೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಇವುಗಳ ಜೊತೆಗೆ ಗುಲಾಬಿ ಟಾಕೀಸ್ ಚಿತ್ರಕತೆಯ ಉಳಿದ ಭಾಗ, ಹಾಗೂ ಅವಿನಾಶ್ ರ ಟಾಪ್ಸಿ ಟರ್ವಿ ನಾಟಕದ ಕೊನೆ ಭಾಗವನ್ನು ಪ್ರಕಟಿಸಲಾಗಿದೆ. ದೃಶ್ಯ ಮಾಧ್ಯಮದ (ಸಿನೆಮಾ, ಯಕ್ಷಗಾನ, ರಂಗಭೂಮಿ, ಕಿರುತೆರೆ, ಚಿತ್ರಕಲೆ, ಫೋಟೊಗ್ರಪಿ) ಕುರಿತು ಬರೆಯಲಿಚ್ಚಿಸುವವರು ತಮ್ಮ ಬರಹಗಳನ್ನು krnsmyle@gmail.com ಗೆ ಈ ಮೇಲ್ ಮಾಡಿ. ಸರ್ವರಿಗೂ ವಿರೋಧಿ ನಾಮ ಸಂವತ್ಸರದ ಶುಭ ಆಶಯಗಳು..
|
|