ದೃಶ್ಯಕ್ಕೊಂದು ನುಡಿಗಟ್ಟು

" ನಾನಿನ್ನೂ ಇನ್ ಸೆಕ್ಯೂರ್" - ಕಿಶೋರ್

ಸಂವಾದ ತಂಡ: ಕನ್ನಡದಲ್ಲಿ ಹೋಲಿಕೆಯೇ ಮಾಡಲಾಗದಂತಹ ಪರಿಪೂರ್ಣ ನಟ ನೀವು. ಕನ್ನಡ ಸಿನೆಮಾ ಸಂದರ್ಭದಲ್ಲಿ ನಿಮ್ಮನ್ನ ಎಲ್ಲಿ ಪ್ಲೇಸ್ ಮಾಡೋದು ಅನ್ನೋದರ ಬಗ್ಗೆ ನಮಗೇ ಒಂದು ಗೊಂದಲವಿದೆ. ನೀವು ನಟಿಸಿರುವ ಪಾತ್ರಗಳೆಲ್ಲ ಪರಿಪೂರ್ಣ ಎನಿಸುತ್ತದೆ,   this is because of your gestures   ಅದ್ಭುತವಾಗಿ ನಿಮ್ಮ ಗೆಸ್ಚರ್ ಗಳು ತೆರೆಯ ಮೇಲೆ ಮೂಡಿ ಬರುತ್ತವೆ, ಮತ್ತು ಪಾತ್ರವನ್ನು ಪರಿಪೂರ್ಣವಾಗಿಸುತ್ತದೆ. ಒಬ್ಬ ನಟನಾಗಿ ನಿಮ್ಮನ್ನ ನೀವು ಹೇಗೆ ನಿರೂಪಿಸಿಕೊಳ್ಳುತ್ತೀರಿ.

ಕಿಶೋರ್: ಸಾಕಷ್ಟು ಆಲೋಚನೆ ಮಾಡಿ ಉತ್ತರ ಕೊಡಬೇಕಾದಂತಹ ಪ್ರಶ್ನೆ. ನಾನು ಸಾಮಾನ್ಯವಾಗಿ ಕೊಡುವ ಉತ್ತರ ತೀರಾ ಹಂಬಲ್ ಅನ್ನಿಸಬಹುದು. ಬಂದದ್ದನ್ನ ಬಂದ ಹಾಗೆ ಮಾಡಿಕೊಂಡಿದ್ದು ಹೋಗಿದ್ದೇ ಜಾಸ್ತಿ. ಹಾಗೇ ಮಾಡಿದ್ದರಿಂದಲೇ ಒಂದು  ಜಿನ್ಯೂನೆಸ್ ಸಾಧ್ಯವಾಯ್ತು ಅಂತ ಅನ್ಸುತ್ತೆ. ನಂಬಿದ್ದನ್ನ ಮಾಡುವಾಗ ಪಾತ್ರ ಹೆಚ್ಚಿನ ಅರ್ಥಪೂರ್ಣತೆಯನ್ನ ಪಡೆದುಕೊಳ್ಳುತ್ತದೆ.


ಸಂವಾದ: ಇದು ನಾನೊಬ್ಬನೇ ಹೇಳ್ತಾ ಇರೋ ಮಾತಲ್ಲ. ಪೊಲ್ಲಾಚಿ ಸಿನೆಮಾಕ್ಕೆ ಸಂಬಂಧಪಟ್ಟ ಹಾಗೆ ಸಂದರ್ಶನವೊಂದರಲ್ಲಿ ಧನುಷ್  he surpassed me  ಎಂದಿದ್ದಾರೆ.


ಕಿಶೊರ್: ಆ ಸಿನೆಮಾ ನೋಡಿ ಧನುಷ್ ಫೋನ್ ಮಾಡಿದ್ರು. "ನೀವೇ ಆ ಸಿನೆಮಾ ಹೀರೊ" ಅಂದ್ರು. ನಿರ್ದೇಶಕರೂ ಕೂಡ ಫ಼ೋನಾಯಿಸಿ ಅದೇ ಮಾತು ಹೇಳಿದ್ರು. ನಾನು ಏನ್ ಸಾರ್ ನಾನೇನು ಮಾಡೇ ಇಲ್ಲ ಅಂತ ಹೇಳ್ದೆ. ಅದಕ್ಕವರು ಅದಕ್ಕೇ ಅದು ವಿಶೇಷವಾಗಿ ಬಂದಿದೆ. ನೀನೆನೆನೋ ಮಾಡ್ಲಿಕ್ಕೆ ಪ್ರಯತ್ನ ಪಡದೆ ಇರೋದೇ ಆ ಪತ್ರ ಚೆನ್ನಾಗಿ ಬರ್ಲಿಕ್ಕೆ ಕಾರಣ ಅಂದ್ರು.
ಒಂದು ಕಥೆಗೆ ಒಂದು ಪಾತ್ರಕ್ಕೆ ನಟನೆಯ  ಅವಶ್ಯಕತೆ ಎಷ್ಟಿದಿಯೋ ನಟ ಅಷ್ಟನ್ನೇ ನಿರ್ವಹಿಸಬೇಕು. ಕ್ರೆಡಿಟ್ ಗೋಸ್ ಟು ಹಿಮ್. ಆ ಪಾತ್ರಕ್ಕೆ ಮೊದಲು ನಾನಾ ಪಾಟೆಕರ್ ಅವರನ್ನ ಹಾಕಿ ಕೊಳ್ಳಬೇಕು ಅಂತ ಇದ್ರು. ಅವರನ್ನ ಹಾಕಿದ್ರೆ ಅದು ಇನ್ನೊಂದೇ ಸ್ತರದಲ್ಲಿ ಬರ್ತಾ ಇತ್ತು.


ಸಂವಾದ: ಹಿಂದಿಯಲ್ಲಿ ನಾನಾ ಪಾಟೇಕರ್ ನಂತಹ ನಟ ಹುಟ್ಟಿಕೊಂಡಾಗ ಬಾಲಿವುಡ್ ಮುಖ್ಯವಾಹಿನಿಯ ಸಿನೆಮಾ ಬಿಟ್ಟು ಪಾಟೇಕರ್ ಪ್ರತಿಭೆಯನ್ನ ಬಳಸಿಕೊಂಡೇ ಚಿತ್ರ ಕಥೆಗಳನ್ನ ಹೆಣೆಯಲಾಯಿತು. ನಮ್ಮಲ್ಲೂ ನೀವಿದ್ದೀರಾ, ರಂಗಾಯಣ ರಘು ಇದ್ದಾರೆ. ನಿಮ್ಮಂತಹ ಕಲಾವಿದರನ್ನ ಸೆಂಟ್ರಿಕ್ ಆಗಿ ಇಟ್ಟುಕೊಂಡು ಚಿತ್ರಕಥೆ ಹೆಣೆಯುವ ಪ್ರಯತ್ನ ಏನಾದರೂ ಆಗ್ತಾ ಇದೀಯಾ?

ಕಿಶೋರ್: ಸಾಧ್ಯತೆ ಇದೆ. ಪ್ರಯತ್ನ ಆಗ್ತಾ ಇಲ್ಲ. ಎಲ್ಲೋ ಜೀವಂತಿಕೆ ಕೊರತೆ ಇದೆ. ನಮ್ಮಲ್ಲಿ ಮೂಲ ಪ್ರತಿಭೆಗಳನ್ನ ಬಳಸಿಕೊಳ್ಳೋ ಹೊಸ ಪ್ರಯತ್ನ ನಡಿತಾ ಇಲ್ಲ. ನಮ್ಮಲ್ಲಿ ಸಕ್ಸಸ್ ಫ಼ಾರ್ಮುಲಾ ಬಳಸೋದು ಮಾತ್ರ ಗೊತ್ತು. ಮೂಲ ಪ್ರತಿಭೆಯನ್ನ ಬಳಸಿಕೊಳ್ಳೋದು ಕಾಣ್ತಾ ಇಲ್ಲ.


ಕಬಡ್ಡಿ ಸಿನೆಮಾ ಬಗ್ಗೆ: ನಾವೆಲ್ಲ ಸೇರಿ ವಿಸ್ತಾರ ಅನ್ನೋ ಪ್ರೊಡಕ್ಶನ್ ಕಂಪನಿ ಇಟುಕೊಂಡೀದ್ದಿವಿ. ಸಿನೆಮಾಕ್ಕೆ ಬರೋ ಹೊಸ ಹುಡುಗರಿಗೆ ಒಂದು ಟ್ರೇನಿಂಗ್ ತರಹ ಆಗಲಿ ಅಮ್ಟ. ಚೇತನ್ ನ ವಿಸ್ತಾರದ ಮೂಲಕ ಆ ದಿನಗಳು ಪರಿಚಯ ಮಾಡಿದ್ವಿ. ಒಂದು ಸೃಜನಶೀಲ ಸಿನೆಮಾ ಮಾಡಬೇಕು ಅಂದುಕೊಂಡಾಗ ನರೆಂದ್ರ ಬಾಬು ಕಬಡ್ಡಿ ಕತೆ ಹೇಳಿದ್ರು.  ಕಬಡ್ಡಿ, ಕಳೆದು ಹೋಗ್ತಾ ಇರೋ ಒಂದು ದೇಸಿ ಕ್ರೀಡೆ..  ಸಾಂಸ್ಕೃತಿಕವಾಗಿ ಒಂದು ಮೈಲಿಗಲ್ಲಾಗಬಹುದಾದ ಕಥೆ ಅನ್ನಿಸ್ತು. ಇದನ್ನ ತುಂಬಾ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿದ್ವಿ, ಆದರೆ ಆ ಮಟ್ಟದಲ್ಲಿ ಆಗಲಿಲ್ಲ ಕನಸುಗಳೆಲ್ಲ ಕನಸುಗಳಾಗೇ ಉಳಿದುಬಿಡ್ತು. ತುಂಬಾ ಬೇಜಾರಿದೆ ನನಗೆ ಅದರ ಬಗ್ಗೆ. ಈ ಚಿತ್ರ ಮಾಡಿದ್ರೆ ನಮಗೆ ಹೆಮ್ಮೆಯ ವಿಷಯ ಅನ್ನಿಸ್ತು. ಇನ್ನೊಂದು ಲಾಭ ಅಂದ್ರೆ ಕಬಡ್ಡಿ ಮಾಡಿದ್ರೆ ಕಬಡ್ಡಿ ಯೇ ಸ್ಟಾರ್. ನಿಮಗೆ ಇನ್ನೊಬ್ಬ ಸ್ಟಾರ್ ಅಗತ್ಯ ಇರಲ್ಲ. ಇವತ್ತು ಥಿಯೆಟರ್ ಗೆ ಬರ್ತಾ ಇರೋ ಜನ ಕೂಡ ಕಬಡ್ಡಿ ಆಟದಿಂದಾನೆ ಬರ್ತಾ ಇದಾರೆ. ಸಾಹಿತ್ಯ ಕೃತಿಯ ಭಾಷೆಯೇ ಬೇರೆ. ಸಿನೆಮಾ ಭಾಷೆಯೇ ಬೇರೆ. ಕಬಡ್ಡಿ ಸಿನೆಮಾ ಭಾಷೆಯಾಗಿ ಇನ್ನೂ ಒಳ್ಳೆಯ ಕಲಾಕೃತಿಯಾಗಿ ಬರಬಹುದಿತ್ತು ಅನ್ಸುತ್ತೆ. ಸದ್ಯಕ್ಕೆ ಅದೀಗ ಒಳ್ಳೆಯ ಪ್ರಯತ್ನ ಅಷ್ಟೆ. ಒಳ್ಳೆಯ ಪ್ರಯತ್ನ ಒಳ್ಳೆಯ ಸಿನೆಮಾ ಆಗಿ ಪರಿವರ್ತಿತವಗೋದರಲ್ಲಿ ಸೋತಿದೆ. ಸಾಹಿತ್ಯ ಕೃತಿಯ ಭಾಷೆಯೇ ಬೇರೆ. ಸಿನೆಮಾ ಭಾಷೆಯೇ ಬೇರೆ. ತಮಿಳಿನಲ್ಲಿ ಸಿನೆಮಾ ಭಾಷೆನಾ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಅನ್ಸುತ್ತೆ.

ಒಟ್ಟಾರೆಯಾಗಿ ಕಬಡ್ಡಿ ಒಳ್ಳೆಯ ಪ್ರಯತ್ನ. ನಿರ್ದೇಶಕರ ಮೊದಲ ಚಿತ್ರ ಅನ್ನೋ ರಿಯಾಯಿತಿ ಕೊಟ್ಟರೆ ಅವರ ಕೆಲಸ ಚೆನ್ನಾಗಿಯೇ ಮಾಡಿದಾರೆ. ಆದರೆ ಸಿನೆಮಾ ಅಂದ ಮೇಲೆ ಮೊದಲು, ಕೊನೆ ಅನ್ನೋ ರಿಯಾಯಿತಿ ಇಲ್ಲ. ಸಿನೆಮಾ, ಸಿನೆಮಾ ಆಗ್ಬೇಕು ಅಷ್ಟೆ.

ಒಬ್ಬ ಮುಗ್ಧ, ಒರಟನ ಪಾತ್ರದಲ್ಲಿ ಪ್ರವೀಣ್ ಚೆನ್ನಾಗಿಯೇ ಅಭಿನಯಿಸಿದ್ದಾರೆ.

 

ಕಬಡ್ಡಿ  vs  ದುನಿಯಾ: ದುನಿಯಾ ಜನಪ್ರಿಯತೆ ತಂದು ಕೊಟ್ಟ ಪಾತ್ರ. ಕಬಡ್ಡಿ ವೈಯಕ್ತಿಕವಾಗಿ ನನಗೆ ಖುಷಿ ಕೊಟ್ಟ ಪಾತ್ರ. ಕಬಡ್ಡಿ ಮೇಲಿನ ಪ್ರೀತಿ, ಆಶ್ರಯದಾತನ ಹಂಗು, ಇದರ ಮಧ್ಯೆ ಕನಸುಗಳಿಗೆ ರೂಪ ಕೊಡುವ ಶಿಷ್ಯ, ಶಿಷ್ಯನ ಬದುಕು ಇವೆಲ್ಲದರ ಮಧ್ಯೆ  ಅಸಹಾಯಕತೆಯ ಪಾತ್ರ. ಎಲ್ಲರಿಂದಲೂ ರಿಜೆಕ್ಟ್ ಆಗಿ ಕೊನೆಗೆ ತನ್ನ ಶಿಷ್ಯನಿಂದಲೂ ತಿರಸ್ಕೃತಗೊಳ್ಳುತ್ತಾನೆ. ತುಂಬಾ ಖುಷಿ ಕೊಟ್ಟ ಪಾತ್ರ.


ಸಂವಾದ: ನಿಮ್ಮ ಮೊದಲ ಚಿತ್ರ ಕಂಠಿ. ಆ ಪಾತ್ರಕ್ಕೂ ಸಾಕಷ್ಟು ಜನ ಮನ್ನಣೆ ಸಿಗ್ತು. ಅದರ ನಂತರ ನೀವು ನಿರ್ವಹಿಸಿದ ಪಾತ್ರದಲ್ಲಿ ಸಾಕಷ್ಟು ಒಳ್ಳೆಯ ಪಾತ್ರಗಳೇ. ನಿವೇನಾದರು ಪಾತ್ರ ಒಪ್ಪಿಕೊಳ್ಳುವ ಮುಂಚೆ ಸ್ಕ್ರೀನ್ ಪ್ಲೇ ನೋಡ್ತೀರಾ?

ಕಿಶೋರ್: ಮೊದಲ ಚಿತ್ರ ಕಂಠಿ ಸಿಕ್ಕಿದ್ದು ನನ್ನ ಅದೃಷ್ಟ. ಕಂಠಿ ಯಾರೋ ಬೆಳಗಾವಿ ಹುಡುಗರು ಸೃಷ್ಟಿಸಿದ ಪಾತ್ರ. ತುಂಬಾ ಗಟ್ಟಿ ಪಾತ್ರ. ಅದರ ನಂತರ ಸಾಕಷ್ಟು ಜೊಳ್ಳು ಪಾತ್ರಗಳನ್ನು ಮಾಡಿದ್ದೀನಿ. ಚಿತ್ರ ಕಥೆ ಕೇಳೋದು ಇಲ್ಲಿ ರೂಲಡ್ ಔಟ್. ಅದಕ್ಕಾಗಿ ಸಾಕಷ್ಟು ಪಾತ್ರ ಕಳ್ಕೊಂಡಿದ್ದೀನಿ. ಹೊಸತನಕ್ಕೆ ಇಲ್ಲಿ ಸಾಕಷ್ಟು ನಿರ್ದೇಶಕರು ತೆರೆದುಕೊಂಡಿಲ್ಲ. ತಮಿಳಿನಲ್ಲಿ ಸಂಪೂರ್ಣ ಕಥೆ ಹೇಳ್ತಾರೆ. ಮೇಲಾಗಿ ಅದರ ಬಗ್ಗೆ ಅರ್ಥಪೂರ್ಣ ಚರ್ಚೆ ಕೂಡ ನಡೆಯುತ್ತೆ. ಹಣಕಾಸಿನ ಮುಗ್ಗಟ್ಟಿದ್ದಾಗ ಚಿತ್ರಕತೆಯನ್ನೆಲ್ಲಾ ಕೇಳಿ ಪಾತ್ರ ಒಪ್ಪಲಾಗುವುದಿಲ್ಲ. ಕೆಲವೊಮ್ಮೆ ದಾಕ್ಷಿಣ್ಯಕ್ಕೆ ಸಿನೆಮಾ ಮಾಡಬೇಕಾಗುತ್ತದೆ. ಎಲ್ಲರಿಗೂ ಇನ್ ಸೆಕ್ಯೂರಿಟಿ ಫ಼ೀಲ್ ಇರೋದ್ರಿಂದ ಪ್ರಯೋಗಗಳು ನಡೀತಾ ಇಲ್ಲ.

ಸಂವಾದ:  how in secure you are as an actor?

ಕಿಶೋರ್ :ನಾನೂ ಕೂಡ ಇನ್ ಸೆಕ್ಯೂರ್:  ಈಗಲೂ ನನ್ನೊಳಗೆ ಇನ್ ಸೆಕ್ಯೂರಿಟಿ ಇದೆ. ಒಮ್ಮೆ ಪ್ರಕಾಶ್ ರಾಜ್ ಹೇಳಿದ್ದು- ನಾವ್ಯಾಕೆ ಡಿಸೈಡ್ ಮಾಡ್ಬೆಕು ನಾವೆನಾಗ್ಬೆಕು ಅಂತ. ನನ್ನನ್ನ ಯಾರು ಹೇಗೆ ಬೆಳೆಸ್ಕೊತಾರೋ ಬೆಳೆಸ್ಲಿ. ಒಂದು ಹಂತದ ತನಕ. ಇದರ ಮಧ್ಯೆ  ಅಲ್ಲಲ್ಲಿ ನಮ್ಮ ಪ್ರಜ್ಞೆ ಉಪಯೋಗಿಸೋಣ. ಇದು ಒಬ್ಬ ಸರ್ವೈವರ್ ನ ಫ಼ಿಲಾಸಪಿ. ಆದರೆ ನನಗೆ ಅದು ಒಪ್ಪಿಗೆಯಾಗಲ್ಲ. ಒಂದು ಪಾತ್ರ ನಾನು ಮಾಡಲಿಕ್ಕೆ ಆಗೋದೆ ಇಲ್ಲ ಅಂದ್ಮೆಲೆ ಮಾಡಬಾರದು. ಆ ತರ ಎಷ್ಟೋ ಸಿನೆಮಾ ಬಿಟ್ಟಿದೀನಿ.  ಎಲ್ಲೋ ಒಂದು ಕಡೆ ನನ್ನೊಳಗೆ ಇನ್ಸೆಕ್ಯೂರ್ ಆಗಿದೀನಿ. ಸಿನೆಮಾ ತೃಪ್ತಿಗಾಗಿ ಮಾಡಿದಾಗ ಹಣಕಾಸಿನ ಮುಗ್ಗಟ್ಟಿನ ಅಭದ್ರತೆ. ಎಲ್ಲಿ ನನ್ನ ಸಂಸಾರ ವನ್ನ ತೊಂದರೆಗೆ ಸಿಕ್ಕಿಸ್ತಾ ಇದಿನೋ ಅನ್ನೋ ಅಭದ್ರತೆ.  so both the way i am quite insecure.

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು