ದೃಶ್ಯಕ್ಕೊಂದು ನುಡಿಗಟ್ಟು

ಬನ್ನಿ- ಭಾಗವಹಿಸಿ

ಬನ್ನಿ- ಭಾಗವಹಿಸಿ
ಸಿನೆಮಾಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆಯಬೇಕೆನ್ನುವ ನಮ್ಮ ಹಂಬಲ; ಹುಚ್ಚು. ಇದರ ಫಲವೇ ಮಠ ಚಿತ್ರದ ಸಂವಾದ ಮತ್ತು ಗಿರೀಶ್ ಕಾಸರವಳ್ಳಿ ಗೌರವಾರ್ಥ ನಡೆಸಿದ ’ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ’ ಕಾರ್ಯಕ್ರಮ. ಇದರ ಮುಂದುವರೆದ ಭಾಗವೇ ಕಬಡ್ಡಿ ಚಿತ್ರ ಪ್ರದರ್ಶನ ಮತ್ತು ಸಂವಾದ.

ಕಳೆದ ಆರು ತಿಂಗಳಲ್ಲಿ ಬಿಡುಗಡೆಯಾದದ್ದು ಅರವತ್ತು ಚಿತ್ರಗಳು. ತಿಂಗಳಿಗೆ ಸರಾಸರಿ ಹತ್ತು ಚಿತ್ರಗಳು: ವಾರಕ್ಕೆ ಎರಡರಿಂದ ಮೂರು ಚಿತ್ರಗಳು. ಆ ಕಡೆ ಕಲಾಕೃತಿಯೂ ಎನಿಸಿಕೊಳ್ಳದೆ, ಇತ್ತ ಹಣವೂ ಗಳಿಸದೇ ಬಿಡುಗಡೆಯಾದ ಚಿತ್ರಗಳೆಲ್ಲವೂ ಅತಂತ್ರ ಪಿಶಾಚಿಗಳಾಗಿ ಸಾರಾಸಗಟಾಗಿ ಪ್ರೇಕ್ಷಕ ಮಹಾಶಯನಿಂದ ತಿರಸ್ಕೃತಗೊಂಡಿವೆ. ಇವುಗಳ ಮಧ್ಯೆ ಜುಲೈ ನಲ್ಲಿ ಬಿಡುಗಡೆಯಾದ ಕಬಡ್ಡಿ ಚಿತ್ರ ಒಂದು ಒಳ್ಳೆಯ ಪ್ರಯತ್ನವೆಂದು ಸಿನೆಮಾ ನೋಡಿದ ಸಹೃದಯರೆಲ್ಲಾ ಒಪ್ಪಿಕೊಂಡಿದ್ದಾರೆ.

ನಮ್ಮ ನಡುವಿನ ಕೆಲವೇ ಕೆಲವು ಸೆನ್ಸಿಬಲ್ ಕಲಾವಿದರಲ್ಲಿ ಕಿಶೋರ್ ಕೂಡ ಒಬ್ಬರು. ಕಂಠಿ, ದುನಿಯಾ, ಕಬಡ್ಡಿ ಇರಬಹುದು. ತಮಿಳಿನ ಪೊಲ್ಲಾಧವನ್ ಇರಬಹುದು. ಅಥೆಂಟಿಕ್ ಆಗಿ ಅಭಿನಯಿಸುವ ಕಲೆ ಅವರಿಗೆ ಸಿದ್ಧಿಸಿಬಿಟ್ಟಿದೆ ಎನಿಸುತ್ತದೆ. ಅವರೊಂದಿಗೆ ನಡೆಸಿದ ಪುಟ್ಟ ಮಾತುಕತೆಯೊಂದು ಈ ಸಂಚಿಕೆಯಲ್ಲಿದೆ.

ತಮ್ಮ ಮೊದಲ ಚಿತ್ರದ ಮೂಲಕವೇ ಭರವಸೆ ಮೂಡಿಸಿರುವ ಕಬಡ್ಡಿ ನಿರ್ದೇಶಕ ನರೇಂದ್ರ ಬಾಬು ಅವರು ಮುಂದೆ ದಿಗ್ದರ್ಶಿಸಬಹುದಾದ ಚಿತ್ರಗಳ ಬಗ್ಗೆ ನಮಗೆ ಕುತೂಹಲವಿದೆ. ಅವರು ನಮ್ಮೊಂದಿಗೆ ಹಂಚಿಕೊಂಡ ಮಾತುಗಳ ತುಣುಕು ಸಹ ಈ ಸಂಚಿಕೆಯಲ್ಲಿದೆ.

ಕಬಡ್ಡಿಯಂತಹ ಒಳ್ಳೆಯ ಪ್ರಯತ್ನವನ್ನ ನಾವು ಗುರುತಿಸದೇ ಹೋದರೆ ಮುಂದೆ ಅಂತಹ ಪ್ರಯತ್ನಗಳು ನಿಂತೇ ಹೋಗಬಹುದು. ಹಾಗಾಗಿ ಇದೇ ಬರುವ ಅಗಸ್ಟ್ ೯ ಕ್ಕೆ ಕಬಡ್ಡಿ ಚಿತ್ರದ ಕುರಿತಾದ ಅರ್ಥಪೂರ್ಣ ಚರ್ಚೆ ನಡೆಸಬೇಕೆಂದು ಅಂದುಕೊಂಡಿದ್ದೇವೆ. ಸಂವಾದಕ್ಕೂ ಮೊದಲು ಕಬಡ್ಡಿ ಚಿತ್ರ ತಂಡದ ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ಕುಳಿತು ಸಿನೆಮಾ ನೋಡುವ ಅವಕಾಶವಿದೆ. ಅದಕ್ಕೆ ಸಂಬಂಧಿಸಿದ ವಿವರಗಳನ್ನು ಇದೇ ಪುಟದ ತುದಿಯಲ್ಲಿದೆ. ಚಿತ್ರತಂಡದ ಕಿರು ಪರಿಚಯವೂ  ಇಲ್ಲಿದೆ.

ತಪ್ಪದೇ ಬನ್ನಿ..
ಈ ಸಂದರ್ಭಕ್ಕೆ ವಿಶೇಷವಾದ ಪುಟಗಳನ್ನು ಸಿದ್ಧಪಡಿಸಲಾಗಿದೆ. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

- ಕಿರಣ್ ಎಂ

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು