ದೃಶ್ಯಕ್ಕೊಂದು ನುಡಿಗಟ್ಟು

'ಮನಸಾರೆ' ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ

ಸಂವಾದ.ಕಾಂ
 ದೃಶ್ಯಕ್ಕೊಂದು ನುಡಿಗಟ್ಟು

ಆಯೋಜಿಸಿರುವ

ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ

ಸಂವಾದದಲ್ಲಿ ಭಾಗವಹಿಸಲಿರುವರು:
ನಿರ್ಮಾಪಕ-  ರಾಕ್‌ಲೈನ್ ವೆಂಕಟೇಶ್
ನಿರ್ದೇಶಕ-ಯೋಗರಾಜ ಭಟ್
ದಿಗಂತ್ - ಕಲಾವಿದ
ನೀತೂ -ಕಲಾವಿದೆ
ರಾಜು ತಾಳಿಕೋಟೆ - ಕಲಾವಿದ
ಮಿತ್ರ - ಕಲಾವಿದ
ಪವನ್ ಕುಮಾರ್ - ಕಲಾವಿದ, ಚಿತ್ರಕತೆಗಾರ
ಸತೀಶ್ - ಕಲಾವಿದ

ದಿನಾಂಕ: ೨೯-೧೧-೨೦೦೯ ರ ಭಾನುವಾರ

ಪ್ರದರ್ಶನ: ಸಾಗರ್ ಚಿತ್ರಮಂದಿರ, ಬೆಳಿಗಿನ ಪ್ರದರ್ಶನ
ಭೋಜನಾನಂತರ ಸಂವಾದ

ಸಂವಾದದ ಸ್ಥಳ: ಅಡಿಗ ರೆಸಿಡೆನ್ಸಿ, ಸಾಗರ್ ಚಿತ್ರಮಂದಿರದ ಹಿಂಭಾಗ

ಚರ್ಚೆಯನ್ನು ನಡೆಸಿಕೊಡಲಿರುವವರು:
ಟೀನಾ ಶಶಿಕಾಂತ್, ತುಮಕೂರು - ಲೇಖಕಿ
ಹೇಮಾ ಪವಾರ್ ಲೇಖಕಿ, ಕನ್ನಡ
ಚೇತನ ತೀರ್ಥಹಳ್ಳಿ, ಕನ್ನಡಪ್ರಭ, ಸಹ ಸಂಪಾದಕಿ
ಎಸ್ ಆರ್ ರಾಮಕೃಷ್ಣ, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ
ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್ ಕನ್ನಡ.ಕಾಂ

ಕಾರ್ಯಕ್ರಮಕ್ಕೆ ಭಾಗವಹಿಸುವವರು ಪಾಸ್ ಹೊಂದಿರುವುದು ಕಡ್ಡಾಯ.
ಪಾಸ್ ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ-
ರವಿ-99004 39930
ಕಿರಣ್- 97317 55966
ಅರುಣ್(SAP Labs)-98453 85156
ರಾಜ್ ಕುಮಾರ್ - 94481 71069

ಮನಸಾರೆ....

  ಹಳೆ ಪಾತ್ರೆ, ಹಳೆ ಕಬ್ಣ, ಹಳೆ, ಲವ್ವು, ಹಳೆ ಲವ್ವು  ಫೇಲ್ಯೂರ್. ಉಸಿರಾಡೋ ಗಾಳೀಲಿ ಕೂಡ ಹೊಸತನ ಇಲ್ಲ. ಅಂತ ಕೊರಗಿ , ಊರವರಿಂದೆಲ್ಲ ಅರೆ ಹುಚ್ಚ ಎನಿಸಿಕೊಂಡಿರುವ ನಾಯಕ.

ಅದೇ ಹಳೆ ಮಚ್ಚು, ಹಳೆ ಲಾಂಗು, ಹಳೆ ಪ್ರೇಮ್ ಕಹಾನಿ ಚಿತ್ರಗಳನ್ನು ನೋಡಿ  ಅರೆ ಹುಚ್ಚನಾಗಿರುವ ಕನ್ನಡ ಪ್ರೇಕ್ಷಕ.

ಈ ಇಬ್ಬರೂ ಅರೆ ಹುಚ್ಚರನ್ನು ದಡ ಸೇರಿಸುವ ಕೆಲಸವನ್ನ ಭಟ್ಟರು ಮನಸಾರೆ ಮಾಡಿದ್ದಾರೆ.

ಮುಂಗಾರು ಮಳೆಯ ನಾಯmanasaare kannada cenemaಕನಿಗೂ ಇಲ್ಲಿಯ ನಾಯಕನಿಗೂ ಅಂತಹ ವ್ಯತ್ಯಾಸವಿದ್ದಂತಿಲ್ಲ. ಹಾಗಾಗಿ ..ಮಳೆ ಯ ಮುಂದುವರಿದ ಭಾಗವಾಗಿಯೂ ಇದನ್ನ ನೋಡಬಹುದು. ...ಮಳೆ ಯಲ್ಲಿ ’ಪ್ರೀತಿ ಮಧುರ, ತ್ಯಾಗ ಅಮರ’ ಎಂದು ದುರಂತ ನಾಯಕನಾಗಿ ಹೊರಟ ನಾಯಕ ಇಲ್ಲಿ ಖಾಲಿ ಪೀಲಿ ಯಾಗಿ ಅಲೆಯುತ್ತ, ಲೂಸ್ ತರ ಆಡುತ್ತಾನೆ. ಆಕಸ್ಮಿಕವಾಗಿ ಹುಚ್ಚರಾಸ್ಪತ್ರೆ ಸೇರುತ್ತಾನೆ. ಅಲ್ಲೊಬ್ಬಳ ಕೂದಲಿಗೆ ಅರ್ಧ ಮರುಳಾಗಿ, ಕಣ್ಣಿಗೆ ಇನ್ನರ್ಧ ಮರುಳಾಗಿ ಪೂರ್ತಿ ಲವ್ವಲ್ಲಿ ಬಿದ್ದೇ ಬಿಡುತ್ತಾನೆ; ಅಲ್ಲಿಂದ ಆ ಹುಡುಗಿಯನ್ನ ಎತ್ತಿ ಹಾಕಿಕೊಂಡು ಹುಚ್ಚಾಸ್ಪತ್ರೆಯಿಂದ ಓಡಿ ಹೋಗುವಲ್ಲಿಗೆ ಇಂಟರ್ ವಲ್.

ಮುಂಗಾರುಮಳೆ ಯಲ್ಲಿದ್ದ ಭಾವೋದ್ವೇಗ ಇಲ್ಲಿಲ್ಲ. ಆ ಮಟ್ಟಿಗೆ ಯೋಗರಾಜ್ ಮೆಚ್ಯೂರ್ ಆಗಿದ್ದಾರೆ. ಇಡೀ ಚಿತ್ರ ಆಪ್ತ ಸಮಾಲೋಚನೆಯಂತೆ ನಡೆದು ಹೋಗುತ್ತದೆ. ಚಿತ್ರಕಥೆ ಅತ್ಯಂತ ಬಿಗಿಯಾಗಿದ್ದರೂ ಕಥೆಯಲ್ಲಿ ಯಾವುದೇ ರೀತಿಯ ಸಂಕೀರ್ಣತೆ ಇಲ್ಲ. ಮುಂಗಾರು ಮಳೆ ಯ ಗಣೇಶ ನಂತೆ ಮನಸಾರೆಯ ಮನೋಹರ ಕೂಡ ವಾಚಾಳಿ. ತಮಗೆ ಹೇಳಬೇಕನ್ನಿಸದ್ದನ್ನೆಲ್ಲ ಭಟ್ಟರು ನಾಯಕನ ಬಾಯಲ್ಲಿ ಆಡಿಸಿದ್ದಾರೆ. ಅಷ್ಟಕ್ಕೂ ಯೋಗರಾಜರಿಗೆ ಹೆಣ್ಣನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ ಅನಿಸಿರುವ ಹಾಗಿದೆ. ಚಿತ್ರದ ತುಂಬೆಲ್ಲಾ ಹೆಣ್ಣಿನ ಕುರಿತಾದ ಸಾಕಷ್ಟು ಸಂಭಾಷಣೆಗಳು ಉದುರುತ್ತವೆ. ಅದಾಗ್ಯೂ ಚಿತ್ರದ ನಾಯಕಿಯ ಪಾತ್ರ ಪೋಷಣೆ ಚಿತ್ರದ ಬಹುದೊಡ್ಡ ಕೊರತೆ. ಸ್ವಲ್ಪ ಅತ್ತ ಗಮನ ಕೊಟ್ಟಿದ್ದರೆ, ಕಥೆಯಲ್ಲಿ ಇನ್ನಷ್ಟು ಸಂಕೀರ್ಣತೆ ಬರುತ್ತಿತ್ತು.

ಮನುಷ್ಯ ಸಂಬಂಧಗಳ ನಗ್ನತೆಯನ್ನ ಅಲ್ಲೊಮ್ಮೆ ಇಲ್ಲೊಮ್ಮೆ ಮಾತುಗಳಲ್ಲಿ ಬಿಚ್ಚಿಡುವ ನಿರ್ದೇಶಕರು ಕಥೆಯೊಳಗೆ ಅದನ್ನು ಎಳೆದು ತರುವ ಗೊಜಿಗೆ ಹೋಗುವುದಿಲ್ಲ. ಸಮಾಜವನ್ನ ಧಿಕ್ಕರಿಸಿ ಮತ್ತೆ ಹುಚ್ಚಾಸ್ಪತ್ರೆಗೆ ಹೋಗಿ ಸೇರುವ ನಾಯಕ; ಅಲ್ಲಿಯ ಮಾನಸಿಕ ಅಸ್ವಸ್ಥೆಯನ್ನ ಮೆಚ್ಚಿ, ಪ್ರೀತಿಸುತ್ತಾನೆ. ಇಲ್ಲಿ ಅರ್ಥವಾಗದ ಪ್ರಶ್ನೆ ಎಂದರೆ:

ಬದುಕಿನಲ್ಲಿ ಎಲ್ಲದಕ್ಕೂ ಬೇಸತ್ತು ಹೋಗಿರುವ ನಾಯಕ, ಬರೀ ನಾಯಕಿಯ ಕೂದಲಿಗೆ ಮರುಳಾಗಿ ಜೀವನ ಪ್ರೀತಿಯನ್ನ ಪಡೆದುಕೊಳ್ಳುವುದು ಹೇಗೆ?

ರಾಜು ತಾಳಿಕೋಟೆಯವರ ಹಾಸ್ಯ ಸನ್ನಿವೇಶಗಳು ಚಿತ್ರಕ್ಕೊಂದು ನಾವಿನ್ಯತೆ ಒದಗಿಸಿದೆ. ಎಲ್ಲಾ ಹಾಡುಗಳು ಕಥೆಗೆ ಅನಗತ್ಯ.
ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಫ್ರೆಷ್ ಆಗಿದ್ದರೂ ಯಾವುದೇ ಫ್ರೇಮ್  ಮನಸಿನಾಳಕ್ಕೆ ಇಳಿಯುವುದಿಲ್ಲ.

ಮನಸಾರೆ ಒಪ್ಪಲಾಗದಿದ್ದರೂ , ಮನಸಾರೆ ಮೆಚ್ಚಬಹುದಾದ ಚಿತ್ರವಿದು..


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು