ಮನಸಾರೆ: ಸಂಭ್ರಮವಾದ ಸಂವಾದ..ಮನಸಾರೆ.. ಚಿತ್ರದ ಸಂಭ್ರಮ ಆಚರಿಸಬೇಕೋ, ಸಂವಾದ ನಡೆಸಬೇಕೋ ಎಂಬ ಗೊಂದಲದೊಂದಿಗೆ, ತರಾತುರಿಯಲ್ಲಿ ಕಳೆದ ಭಾನುವಾರ ನವೆಂಬರ್ ೨೯ ರಂದು ಅಡಿಗ ರೆಸಿಡೆನ್ಸಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಂದುಕೊಂಡದ್ದಕ್ಕಿಂತ ಹೆಚ್ಚಿನ ಜನ ಬಂದರು; ಬಂದವರಲ್ಲಿದ್ದ ಉತ್ಸಾಹ, ಸಿನೆಮಾ ಪ್ರೇಮದ ಬಗ್ಗೆ ಎರಡು ಮಾತಿಲ್ಲ. ತನ್ನ ಒಂದು ಭಾನುವಾರವನ್ನ ಸಿನೆಮಾ ಸಂವಾದಕ್ಕೆ ಮೀಸಲಿಡುವುದು ಬೆಂಗಳೂರಿನ ಮಟ್ಟಿಗಂತೂ ಸುಲಭದ ಮಾತಲ್ಲ. ಕಾರ್ಯಕ್ರಮ, ಸಂಭ್ರಮ ಮಾತ್ರವಾಗದೇ ಅರ್ಥಪೂರ್ಣ ಸಂವಾದವೂ ಆಗಿದ್ದರೇ ನಮಗೊಂದು ಸಾರ್ಥಕತೆ ಇರುತ್ತಿತ್ತು. ಮುಂದಿನ ಸಂವಾದಗಳಲ್ಲಿ ಇದರ ಬಗೆ ಗಂಭೀರವಾಗಿ ಗಮನ ಹರಿಸಲಾಗುವುದು. ಸಂವಾದಕ್ಕೆ ಸಂಪೂರ್ಣ ಬೆಂಬಲ ನೀಡಿದ ರಾಕಲೈನ್ ವೆಂಕಟೇಶ್, ಯೋಗರಾಜ್ ಭಟ್ ಮತ್ತವರ ಸಹಚರರಿಗೆ ಸಂವಾದ ಆಭಾರಿಯಾಗಿದೆ. ನಿರ್ವಾಹಕರಾಗಿ ಸಂವಾದವನ್ನ ನಡೆಸಿಕೊಟ್ಟ ಶ್ಯಾಮ್ ಸುಂದರ್, ಟೀನಾ ಶಶಿಕಾಂತ್, ಹೇಮಾ ಪವಾರ್ ಅವರಿಗೆ ಬಳಗದ ಪರವಾಗಿ ಕೃತಜ್ಞತೆಗಳು. ಮನಸಾರೆ.. ಚಿತ್ರದ ಕುರಿತು ವಿಮರ್ಶಾ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ಆಯ್ಕೆಯಾದ ಹತ್ತು ಬರಹಗಳ ಒಂದು ಸಂಕಲನವನ್ನ ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗೆ ಸಂವಾದ ಡಾಟ್ ಕಾಮ್ ಗಮನಿಸುತ್ತಿರಿ. ಮನಸಾರೆ.. ಸಂವಾದದ ಕಾರ್ಯಕ್ರಮದ ಬಗೆಗೆ ಸಾಂಗತ್ಯ ಬ್ಲಾಗು ಮತ್ತು ದಟ್ಸ್‍ಕನ್ನಡಡಾಟ್‍ಕಾಂ ಗಳ ವರದಿಗಳನ್ನು ಇಲ್ಲಿ ಉಲ್ಲೆಖಿಸುತ್ತಿದ್ದೇವೆ.
|
|