ದೃಶ್ಯಕ್ಕೊಂದು ನುಡಿಗಟ್ಟು

ಸಾಂಗತ್ಯ: ಮೂರನೇ ಚಿತ್ರೋತ್ಸವ

ಗೆಳೆಯರೇ,
ಸಾಂಗತ್ಯ ಜನವರಿ 2ರಂದು ಒಂದು ವರ್ಷಕ್ಕೆ ಕಾಲಿಡುತ್ತದೆ. ಈ ಸಂದರ್ಭದಲ್ಲಿ ಜನವರಿ 16, 17 ರಂದು ಕುಪ್ಪಳ್ಲಿಯಲ್ಲಿ ಮೂರನೇ ಚಿತ್ರೋತ್ಸವ ಹಮ್ಮಿಕೊಂಡಿದೆ. ಚಲನಚಿತ್ರಗಳ ಪ್ರದರ್ಶನ, ಚರ್ಚೆ, ಸಂವಾದವೆಲ್ಲವನ್ನೂ ಆಯೋಜಿಸಲಾಗುತ್ತದೆ. ಇದಕ್ಕೆ ಬರುವವರು ಮೊದಲೇ ತಿಳಿಸಬೇಕು.

ಮುನ್ನೂರು ರೂ. ಪ್ರವೇಶ ಶುಲ್ಕವಿದ್ದು, ಊಟ, ವಸತಿ ಎಲ್ಲವನ್ನೂ ಒದಗಿಸಲಾಗುವುದು. ಚಿತ್ರೋತ್ಸವದ ಮೂಲಕವೇ ಸಿನಿಮಾ ಭಾಷೆಯನ್ನು ಅರಿತುಕೊಳ್ಳುವುದು, ಸಿನಿಮಾ ಪ್ರಶಂಸೆ ಮಾಡುವುದನ್ನು ರೂಢಿಸಿಕೊಳ್ಳುವುದು ಹೀಗೆ...ಹಲವು ಉದ್ದೇಶಗಳಿವೆ. 

ದಯವಿಟ್ಟು, ಬರುವವರು ಒಂದು ಇಮೇಲ್ ಮಾಡಿ. ಇಲ್ಲದಿದ್ದರೆ ಈ ಉತ್ಸವದ ಸಂಚಾಲಕರಾದ ನಿರಂಜನ್ ಕಗ್ಗೆರೆ 98808 33500, ಅಕ್ಷಯ್ ಹೆಗಡೆ-9481 09206, ಪ್ರವೀಣ್ ಹೆಗಡೆ - 98444 91532 ತಿಳಿಸಿ ಹೆಸರು ನೋಂದಾಯಿಸಬಹುದು.
ಧನ್ಯವಾದಗಳೊಂದಿಗೆ 
ಸಾಂಗತ್ಯ.

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು