’ವಿಮುಕ್ತಿ’ ವಿಮರ್ಶಾ ಸ್ಪರ್ಧೆಪಿ ಶೇಷಾದ್ರಿಯವರ ವಿಮುಕ್ತಿಗೆ ರಜತ ಕಮಲ ಸಿಕ್ಕಿದೆ. ಕಾಸರವಳ್ಳಿಯ ನಂತರ ಕನ್ನಡದಲ್ಲಿ ಬಹು ಮುಖ್ಯ ದಿಗ್ದರ್ಶಕರೆನಿಸಿಕೊಂಡಿರುವವರು ಶೇಷಾದ್ರಿ. ಅರ್ಥಪೂರ್ಣ ಚಿತ್ರಗಳನ್ನು ನೀಡುತ್ತಿರುವ ಶೇಷಾದ್ರಿಯವರಿಗೆ ಸಂವಾದ ಬಳಗ ಅಭಿನಂದನೆ ಸಲ್ಲಿಸುತ್ತದೆ. ಈ ಕಾರಣವನ್ನೇ ನೆವವಾಗಿಟ್ಟುಕೊಂಡು ’ವಿಮುಕ್ತಿ’ ಚಿತ್ರದ ಕುರಿತು ವಿಮರ್ಶಾ ಸ್ಪರ್ಧೆ ನಡೆಸಲು ಸಂವಾದ ನಿರ್ಧರಿಸಿದೆ. ಈ ಹಿಂದಿನ ಸಂಚಿಕೆಗಳಲ್ಲಿ ಪ್ರಸ್ತಾಪಿಸಿದಂತೆ ಪರ್ಯಾಯ ಸಿನೆಮಾಗಳನ್ನು ಬೆಂಬಲಿಸಲು ಸಂವಾದ ಡಾಟ್ ಕಾಮ್ ಸದಾ ಬದ್ಧವಾಗಿದೆ. ಹಣದ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನಪ್ರಿಯ ಚಿತ್ರಗಳ ನಡುವೆ ಇಂತಹ ಚಿತ್ರಗಳನ್ನು ಪ್ರೋತ್ಸಾಹಿಸುವುದು ಸಹೃದಯ ನೋಡುಗನ ಜವಾಬ್ದಾರಿಯೂ ಹೌದಲ್ಲವೆ? ವಿಮರ್ಶಾ ಸ್ಪರ್ಧೆಗೆ ಸಂಬಂಧಿಸಿದಂತೆ ವಿವರಗಳು. ವಿಮುಕ್ತಿ ವಿಮರ್ಶಾ ಸ್ಪರ್ಧೆ: ಮೊದಲನೇ ಅತ್ಯುತ್ತಮ ವಿಮರ್ಶೆಗೆ ೨೦೦೦ ರೂಪಾಯಿಗಳು ವಿದ್ಯಾರ್ಥಿ ವಿಭಾಗದ ಅತ್ಯುತ್ತಮ ವಿಮರ್ಶಾ ಲೇಖನಕ್ಕೆ ೨೦೦೦ ರೂಪಾಯಿಗಳು. ಷರತ್ತುಗಳು: ೧. ಬರಹವು ವಿಮರ್ಶಾತ್ಮಕವಾಗಿರಲಿ.
ಪ್ರಕಟಣೆ: ಸಂವಾದ ತಂಡ
|
|