ಸಾಂಗತ್ಯದಿಂದ ಹೊಸ ಸಿನಿ ಮ್ಯಾಗಜಿನ್ಸಾಂಗತ್ಯದ ಸಿನಿಮಾ ಮ್ಯಾಗಜೈನ್ ಗೆ ಚಂದಾ ಅಭಿಯಾನ ಶುರುವಾಗಿದೆ.
ತ್ರೈಮಾಸಿಕವಾಗಿದ್ದು, ಮೂರು ತಿಂಗಳಿಗೊಮ್ಮೆ ಹೊಸರೀತಿಯಲ್ಲಿ ನಿಮ್ಮೆದುರು ಹಾಜರಾಗಬೇಕೆಂಬುದು ಬಳಗದ ಆಸೆ. ಒಂದಿಷ್ಟು ಸಿನಿಮಾಸಕ್ತರೇ ಕೂಡಿಕೊಂಡು ರಚಿಸಿರುವ ಸಾಂಗತ್ಯ ಟ್ರಸ್ಟ್ ಇದರ ಹೊಣೆಯನ್ನು ಹೊತ್ತಿದೆ. ಕನ್ನಡದಲ್ಲಿ ಸಿನಿಮಾ ಶಿಕ್ಷಣಕ್ಕೆಂದು ಮ್ಯಾಗಜೈನ್ ಬಂದದ್ದು ತೀರಾ ಕಡಿಮೆ. ಅದರಲ್ಲೂ ಗಂಭೀರ ನೆಲೆಯಲ್ಲಿ (ಸಾಹಿತ್ಯ ಲೋಕದ ಸಾಕ್ಷಿ, ರುಜುವಾತು, ಸಂಕುಲ,ಸಂಕಲನ, ಸಂಚಯ ಇತ್ಯಾದಿ) ಬಂದ ಪತ್ರಿಕೆಗಳು ಬೆರಳೆಣಿಕೆಯಷ್ಟು. ಸಾಂಗತ್ಯ ಶುರುವಾಗುತ್ತಿರುವುದು ಸಾಹಿತ್ಯ ಲೋಕದ ಅಂಥದೊಂದು ಪರಂಪರೆಯನ್ನು ಸಿನಿಮಾ ಲೋಕದಲ್ಲಿ ಆರಂಭಿಸಬೇಕೆಂದು ಹೊರಟಿದೆ. ಸಿನಿಮಾ ಇಂದು ನಮ್ಮೆಲ್ಲರ ಮಾಧ್ಯಮವಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳಲೇಬೇಕಾದ ಹೊತ್ತಿದು. ಹಾಗಾಗಿ ಸಾಂಗತ್ಯ ಈ ಕೆಲಸಕ್ಕೆ ಮುಂದಾಗಿದೆ. ಚಂದಾ ಆಗಲಿಚ್ಛಿಸುವವರು, ಚಂದಾ ಮಾಡಿ ಕೊಡಲಿಚ್ಛಿಸುವವರು 94807 97113, 94820 73663, 94804 76176 ಗೆ ಸಂಪರ್ಕಿಸಬಹುದು. ನೀವೂ ಚಂದಾದಾರರಾಗಿ, ನಿಮ್ಮ ಗೆಳಯರಿಗೂ ಹೇಳಿ.
|
|