ದೃಶ್ಯಕ್ಕೊಂದು ನುಡಿಗಟ್ಟು

‘ಆರಕ್ಷಕ’ನ ರಕ್ತದ ಬಣ್ಣ ಕೆಂಪಲ್ಲ, ಹಸಿರಂತೆ!

ಆರಕ್ಷಕ’ ಕನ್ನಡ ಚಿತ್ರ ವಿಮರ್ಶೆ, ಪಿ ವಾಸು ಕಥೆ, ಚಿತ್ರಕಥೆ ನಿರ್ದೇಶನ, ಉಪೇಂದ್ರ, kannada movie arakshaka review, upedra in lead, actress sada , director p vasu,  kannada movie news, samvaada.comನ್ನಡದಲ್ಲಿ ಡಬ್ಬಿಂಗ್ ಚಿತ್ರಕ್ಕೆ ಅವಕಾಶ ನೀಡದಿರುವುದು ಒಳ್ಳೆಯದೇ ಆಯ್ತು.  `ಶಟರ್ ಐಲ್ಯಾಂಡ್’ ಎಂಬ ಚಿತ್ರ, ಕನ್ನಡ ಚಿತ್ರಗಳ ಪ್ರೇಕ್ಷಕರಿಗೆ ಡಬ್ ಚಿತ್ರವಾಗಿ ನೋಡುವ ಅವಕಾಶ ಇದ್ದಿದ್ದರೆ.. ಉಪೇಂದ್ರ ಅಭಿನಯದ ‘ಆರಕ್ಷಕ’ ಚಿತ್ರಕ್ಕೆ ಕಾಸು ಹುಟ್ಟೋದು ಕಷ್ಟವಿತ್ತೇನೋ. ಆಪ್ತಮಿತ್ರ, ಆಪ್ತರಕ್ಷಕ ಖ್ಯಾತಿಯ ಪಿ ವಾಸು ಕಥೆ, ಚಿತ್ರಕಥೆ ನಿರ್ದೇಶನವಿರುವ ಆರಕ್ಷಕ ಚಿತ್ರ ಲಿಯಾನಾರ್ಡೊ ಡಿಕಾಪ್ರಿಯೋ ಅಭಿನಯದ ‘ಶಟರ್ ಐಲ್ಯಾಂಡ್’ ಚಿತ್ರ ಅಥವಾ ‘ಡೆನ್ ಲೆಹಾನೆ’ ಬರೆದ ಕಾದಂಬರಿಯೊಂದರ ಆಧಾರಿತ ಇರಬಹುದು.

ಆದರೆ, ಕನ್ನಡದ ಮಟ್ಟಿಗೆ ಉತ್ತಮ ಗುಣಮಟ್ಟದ ಕಥೆಯಾಧಾರಿತ ಚಿತ್ರ ಬಂದಿರುವುದು ಸ್ವಾಗತಾರ್ಹ. ತುಂಬಾ ದಿನದಿಂದ  ಉಪೇಂದ್ರ ಶೈಲಿಯ ಚಿತ್ರಗಳ ದಾಹದಿಂದ ಬಳಲಿದ್ದ ಪ್ರೇಕ್ಷಕರಿಗೆ ಅಮೃತಕೊಟ್ಟರೂ ಒಂದೇ, ಬಿಸ್ಲೇರಿ ನೀರು ಕೊಟ್ಟರೂ ಒಂದೇ. ಒಟ್ಟಿನಲ್ಲಿ ದಾಹ ಇಂಗುವುದು ಮುಖ್ಯ. ಪ್ರೇಕ್ಷಕರ ಪರಿಸ್ಥಿತಿ ಅರಿತು ಅಗತ್ಯಕ್ಕೆ ತಕ್ಕಂತೆ ದಾಹ ನೀಗಿಸಿದ್ದಾರೆ ವಾಸು. ಕೊಟ್ಟ ಕಾಸಿಗೆ ಮೋಸವಂತೂ ಆಗಲ್ಲ. ಮೋಸವಾಯಿತು ಎಂದುಕೊಂಡರೆ ಅದು ಅವರ ತಪ್ಪಲ್ಲ. ಚಿತ್ರದ ಪೋಸ್ಟರ್ ನಲ್ಲಿ ಇದು 2 ಡಿ, 3ಡಿ ಚಿತ್ರ ಎಂದು ಹಾಕಿಲ್ಲ.

ಮುಂದೆ ಓದಿ >>

ಸಿದ್ಲಿಂಗು: ಒಂಟಿ ಜೀವಗಳ ಅದಮ್ಯ ಪ್ರೀತಿಯ ಪಿಸುಮಾತು

ಸಿದ್ಲಿಂಗು - ಉದ್ದದ ಕಥೆ. ಆತನ ಹುಟ್ಟಿನಿಂದ ಶುರುವಾಗುವ ಕಥೆ. ಹುಟ್ಟುತ್ತಲೇ ಅಮ್ಮನನ್ನು ಕಳೆದುಕೊಂಡು ಅನಾಥನಾಗುವ ಸಿದ್ಲಿಂಗು. ಮಾಮೂಲೀ ಕಥೆಗಳಲ್ಲಿನ ಮಲತಾಯಿಯಂತಲ್ಲದೆ, ಅಪ್ಪನ ಪ್ರೇಯಸಿ, ಅಮ್ಮನೇ ಆಗುತ್ತಾಳೆ.  ಆದರೂ ಮಗು ಸಿದ್ಲಿಂಗು ಅಳು ನಿಲ್ಲಿಸುವುದು ಈ ಹೊಸ ಅಮ್ಮ ಕೈಗೆ ‘ಕಾರ್’ ಗೊಂಬೆಯನ್ನಿತ್ತಾಗ. ಅಂದಿನಿಂದ ‘ಕಾರ್’ ಅನ್ನು ಪಡೆಯುವುದು ಆತನ ಕನಸಾಗಿಬಿಡುತ್ತದೆ. ಆ ಕನಸನ್ನು ಅಪ್ಪ, ಅಮ್ಮ ಇಬ್ಬರೂ ಕೂಡ ಪೋಷಿಸುತ್ತಾರೆ. sidlingu  kannada movie review, lose mada, actress ramya, director vijay prasad, kannada film actresses, samvaada.com, ಸಿದ್ಲಿಂಗು ಕನ್ನಡ ಚಿತ್ರ ವಿಮರ್ಶೆ, ಲೂಸ್ ಮಾದ, ರಮ್ಯಾ, ನಿರ್ದೇಶಕ ವಿಜಯ ಪ್ರಸಾದ್, sidlingu ಒಟ್ಟಿನಲ್ಲಿ ಸಿದ್ಲಿಂಗುಗೆ ಹುಟ್ಟಿನಿಂದಲೂ ಅತಿಯಾದ ಕಾರಿನ ಹುಚ್ಚು! ಆತ ಅತಿಯಾಗಿ ದ್ವೇಷಿಸುತ್ತಿದ್ದ ಸಹಪಾಠಿ ಕೂಡ ಆಕೆಯ ತಂದೆ ‘ಕಾರ್’ ಕೊಂಡಾಕ್ಷಣ ಪ್ರೀತಿಯ ಗೆಳತಿಯಾಗಿಬಿಡುತ್ತಾಳೆ. ಒಂಟಿ ಲೆಕ್ಚರರ್ ಳಿಗೆ ಈತ ಜೊತೆಯಾಗುವುದು ಕೂಡ ಆಕೆಯ ಬಳಿ ಕಾರ್ ಇದೆಯೆಂದೇ! ಲೆಕ್ಚರರ್ ಳಿಗೆ ನಿಮ್ಮ ‘ಕಾರ್’ ಹಾಗೂ ‘ಎದೆ’ ಇಷ್ಟ ಎಂದು ಹೇಳಿ ಓಡಿಹೋದವನು ಆಕೆಯ ‘ಕಾರ್’ ನನ್ನು ಮರೆಯಲಾಗದೆ ಕ್ಷಮೆ ಕೇಳುತ್ತಾ ವಾಪಾಸಾಗುತ್ತಾನೆ. ಸೋಗು ಹಾಕಿಕೊಂಡು ಬದುಕುವವರಿಗಿಂತ, ಈತನೇ ವಾಸಿ ಎಂದು ಇನ್ನಷ್ಟು ಹತ್ತಿರವಾಗುವ, ಗಂಡನಿಂದ ದೂರವಾಗಿರುವ ಲೆಕ್ಚರರ್ ಗೆ, ಸಿದ್ಲಿಂಗುವಿನ ತರಹವೇ ರೈಲಿನ ಹುಚ್ಚು! ಅವಳ ಒಂಟಿತನವನ್ನು ಅರ್ಥ ಮಾಡಿಕೊಳ್ಳುವ ಸಿದ್ಲಿಂಗು, ಈ ಇಬ್ಬರ ನಡುವಿನ ಒಡನಾಟ, ಬಾಂಧವ್ಯ ಬೆಳೆದು, ಅಕಸ್ಮಾತ್ತಾಗಿ ದೇಹವು ಕೂಡ ಬೆರೆಯುತ್ತದೆ.

ಮುಂದೆ ಓದಿ >>

ಸಿದ್ಲಿಂಗು ಎಂಬ ದುರಂತ ಕಾವ್ಯ

ಕನ್ನಡವೂ ಸೇರಿದಂತೆ ಭಾರತೀಯ ಮುಖ್ಯವಾಹಿನಿಯ ಸಿನೆಮಾಗಳಲ್ಲಿ ಪ್ರೇಮವೂ ಸೇರಿದಂತೆ ಯಾವುದೇ ಸಂಬಂಧಗಳು ಹುಟ್ಟಿ ಬೆಳೆಯುವುದಿಲ್ಲ. ಬದಲಿಗೆ ನಿಂತಲ್ಲೇ ನಿಂತಿರುತ್ತವೆ. ಅಣ್ಣ-ತಂಗಿಯಾಗಿರಬಹುದು, ಪ್ರೇಮಿಗಳಾಗಿರಬಹುದು, ಸ್ನೇಹಿತರಾಗಿರಬಹುದು ಯಾವೊಂದು ಸಂಬಂಧವೂ ಹುಟ್ಟುವ ಪ್ರಕ್ರಿಯೆಯ ಬಗ್ಗೆ ನಮ್ಮ ಸಿನೆಮಾಗಳು ಗಂಭೀರವಾಗಿ ಪರಿಗಣಿಸಿಲ್ಲ. ಕೆಲವೊಂದು ಕಡೆ ಈ ಸಂಬಂಧಗಳು ಹುಟ್ಟುವ ಪ್ರಕ್ರಿಯೆ ಕೂಡ ನಾಮಕಾವಸ್ಥೆಗೆ ಎಂಬಂತಿರುತ್ತವೆ.

ಸಿದ್ಲಿಂಗು ಸಿನೆಮಾ ಮುಖ್ಯವಾಗುವುದು ಆ ಚಿತ್ರದೊಳಗಿನ ಸಂಬಂಧಗಳು ಹುಟ್ಟಿಕೊಳ್ಳುವ ಸಹಜತೆಯಿಂದ. ಮನುಷ್ಯ ಸಂಬಂಧಗಳ ಹುಟ್ಟು ಆಕಸ್ಮಿಕವೂ, ಕೌತುಕವೂ ಆದ ಸಂಗತಿ. ಅದು ಹುಟ್ಟಿದ ಗಳಿಗೆಗಳನ್ನು ನಮ್ಮ ನಮ್ಮ ಬದುಕಿನಲ್ಲಿ ನೆನೆಸಿಕೊಂಡರೂ ಸಾಕು, ಅದರ ರಸವತ್ತತೆ ನಮಗೆ ಅರ್ಥವಾದೀತು.

ಸಿದ್ಲಿಂಗು ಎಂಬ ಹುಡುಗನ ಬದುಕಿನಲ್ಲೂ ಇಂತಹ ಸಂಬಂಧಗಳು ಹುಟ್ಟುತ್ತವೆ. ಕಳಚಿಕೊಳ್ಳುತ್ತವೆ. ಕಾರು ಕೊಳ್ಳಬೇಕೆಂಬ ಈತನ ಆಸೆಯೊಂದು ಈ ಪಡೆಯುವ-ಕಳೆದುಕೊಳ್ಳುವ ಪ್ರಕ್ರಿಯೆಗೆ ನೆಪವಾಗಿ ಬರುತ್ತದೆ.

ಕನ್ನಡ ಜನಪ್ರಿಯ ಸಿದ್ದ ಮಾದರಿಗಳನ್ನು ತಕ್ಕ ಮಟ್ಟಿಗೆ ಧಿಕ್ಕರಿಸಿ ತನ್ನದೇ ಹಾದಿಯಲ್ಲಿ ನಡೆಯುವ ಸಿದ್ಲಿಂಗು ಚಿತ್ರ ಅದೇ ಕಾರಣಕ್ಕೇ ವಿಭಿನ್ನವೂ ಎನಿಸಿಕೊಳ್ಳುತ್ತದೆ.

ಮುಂದೆ ಓದಿ >>

ಮರೆಯಲ್ಲೇ ಮರೆಯಾದ ಪ್ರತಿಭೆ: ಚೇತನ್ ಆನಂದ್

ಕುರೋಸಾವಾ ೧೯೫೭ ರಲ್ಲಿ ಗೋರ್ಕಿಯ ಲೋವರ್ ಡೆಪ್ತ್ ಕಾದಂಬರಿಯನ್ನ ಸಿನೆಮಾ ಮಾಡುವ ೧೧ ವರ್ಷಕ್ಕೂ ಮೊದಲು ಭಾರತೀಯ ನಿರ್ದೇಶಕನೊಬ್ಬ ಲೋವರ್ ಡೆಪ್ತ್ ಕಾದಂಬರಿಯಿಂದ ಪ್ರಭಾವಿತನಾಗಿ ಹಿಂದಿ ಸಿನೆಮಾವನ್ನ ದಿಗ್ದರ್ಶಿಸಿದ್ದ.

ನೀಚಾ ನಗರ್ ಎಂಬ ಹೆಸರಿನ ಈ ಸಿನೆಮಾ ಕೇನ್ಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಕೂಡ ಗಳಿಸಿತ್ತು.

ಚೇತನ್ ಆನಂದ್ ಇದರ ನಿರ್ದೇಶಕ. ರಷ್ಯಾ ರಾಜಕೀಯದಿಂದ ಪ್ರಭಾವಿತರಾಗಿದ್ದ ಚೇತನ್ ಆನಂದ್, ನೀಚಾ ನಗರ್ ಚಿತ್ರದಲ್ಲಿ ಸಾಮಾಜಿಕ ವಾಸ್ತವವಾದವನ್ನು ತೆರೆದಿಡಲು ಹೈ ಮತ್ತು ಲೋ ಆಂಗಲ್ ಶಾಟ್ ಗಳನ್ನು ಬಳಸಿದ್ದ ರೀತಿ ಇಂದಿಗೂ ನೆನೆಸಿಕೊಳ್ಳಲಾಗುತ್ತದೆ. ಭಾರತೀಯ ಚಿತ್ರರಂಗದ ಪರ್ಯಾಯ ಸಿನೆಮಾ ಯುಗ ಪ್ರಾರಂಭವಾಗುವ ಎಷ್ಟೋ ವರ್ಷದ ಮೊದಲೇ ಇಂತಹ ಕ್ಲಾಸಿಕ್ ಚಿತ್ರವೊಂದು ಬಂದಿತ್ತೆಂಬುದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ.

ಮುಂದೆ ಈತ ಮಾಡಿದ ಹಕೀಕತ್ ಸಿನೆಮಾ, ಇದುವರೆಗೆ ಬಂದ ಯುದ್ಧ ಕೇಂದ್ರಿತ ಚಿತ್ರಗಳಲ್ಲೇ ಮುಂಚೂಣಿಯಲ್ಲಿ ನಿಲ್ಲುತ್ತದೆ. ಭಾರತ-ಚೀನಾ ಯುದ್ದದ ಹಿನ್ನೆಲೆಯ ಈ ಚಿತ್ರ ದೇಶವೊಂದಕ್ಕೆ ಯುದ್ಧವೇಕೆ ಬೇಕು? ಎಂಬ ಮೂಲ ಪ್ರಶ್ನೆಯನ್ನ ತೆರೆದಿಟ್ಟ ವಿಶಿಷ್ಠ ಚಿತ್ರ. ಯುದ್ಧದ ಭಯಾನಕತೆ, ಯುದ್ಧಾನಂತರದ ಆತಂಕಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟ ಈ ಚಿತ್ರವನ್ನ ನೋಡಿದ ಜನ ಸಮೂಹ ಸನ್ನಿಗೆ ಒಳಗಾಗಿದ್ದರು. ಕೈಫ಼ಿ ಆಜ್ಮಿಯ ಸಾಹಿತ್ಯ, ಮದನ್ ಮೋಹನ್ ರ ಸಂಗೀತ ಹಕೀಕತ್ ಚಿತ್ರವನ್ನ ಶ್ರೇಷ್ಠ ಚಿತ್ರಗಳ ಸಾಲಿಗೇರಿಸಿಬಿಟ್ಟಿದ್ದವು.
ನವಕೇತನ್ ನಿರ್ಮಾಣ ಸಂಸ್ಥೆಯಲ್ಲಿ ಸಾಕಷ್ಟು ಚಿತ್ರಗಳನ್ನ ನೀಡಿದ ಚೇತನ್ ಆನಂದ್ ತನ್ನ ಸಹೋದರ ದೇವ್ ಆನಂದ್ ಸೂಪರ್ ಸ್ಟಾರ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮುಂದೆ ಓದಿ >>

ಗಾಂಧಿನಗರದ ಹೊಸ ಕವಲು ವಿಷ್ಣುವರ್ಧನ

vishnuvardhana kannada movie review, sudeep kannada actor, bhavana, dwarakeesh, samvaada.com, kannada actress, kannada film news, ravi arehalli, ಗಾಂಧಿನಗರದ, ವಿಷ್ಣುವರ್ಧನ, ವಿಷ್ಣುವರ್ಧನ ಚಿತ್ರ ವಿಮರ್ಶೆ, ಕನ್ನಡ ಚಿತ್ರ ವಿಮರ್ಶೆಸುದೀಪ್ ಚಿತ್ರಗಳ ಆಯ್ಕೆಯಲ್ಲಿ ಎಚ್ಚರಗೊಂಡಿದ್ದಾರೆ. ಹಾಗಂದುಕೊಳ್ಳಲು ಅವರ ಇತ್ತೀಚಿನ ಎರಡು ಚಿತ್ರಗಳು ಕಾರಣ. ತಮಿಳಿನ ಸಿಂಘಂ ರಿಮೇಕ್ ಆದ ಕೆಂಪೇಗೌಡ ಚಿತ್ರ ತನ್ನ ವೇಗ ಮತ್ತು ಸುದೀಪರ ಬಿರುಸಿನ ನಟನೆಯಿಂದಾಗಿ ಗೆದ್ದಿತ್ತು. ಈಗ ಬಿಡುಗಡೆಯಾಗಿರುವ ವಿಷ್ಣುವರ್ಧನ ಮೇಲ್ನೋಟಕ್ಕೆ ತನ್ನ ಶೀರ್ಷಿಕೆಯ ಕಾರಣದಿಂದಲೇ ಸುದ್ಧಿಯಲ್ಲಿದ್ದು ಗೆದ್ದಂತಹ ಚಿತ್ರ.

ವಿಷ್ಣುವರ್ಧನ ಎಂಬ ಹೆಸರನ್ನು ಆಯ್ಕೆ ಮಾಡಿಕೊಳ್ಳುವಾಗ ದ್ವಾರಕೀಶ್‌ಗೆ ಇದ್ದ ತೊಡಕು ಭಾರತಿಯವರ ಅಸಮಾಧಾನವೊಂದೇ. ಭಾರತಿಯವರು ಆ ಹೆಸರು ತನ್ನದು ಎಂಬಂತೆ ಹಟ ಹಿಡಿದ ನಂತರ ದ್ವಾರಕೀಶ್ ಅದನ್ನೊಂದು ಸಾರ್ವಜನಿಕ ಹಿತಾಸಕ್ತಿಯ ವಿಷಯವೆಂಬಂತೆ ಎಲ್ಲ ವೇದಿಕೆಗಳಿಗೂ ಕೊಂಡೊಯ್ದು ಕೊನೆಗೆ ವಾಣಿಜ್ಯ ಮಂಡಳಿಯಯಲ್ಲಿ ವ್ಯವಹಾರ ಕುದುರಿಸುವವರೆಗೂ ಚಿತ್ರ ಸುದ್ಧಿಯಲ್ಲಿತ್ತು.

ಚಿತ್ರ ಬಿಡುಗಡೆಯಾಗುವಾಗ ಒಂದು ನಿರ್ವಾತ ಸೃಷ್ಟಿಯಾಗಿತ್ತು. ದೊಡ್ಡ ಹೀರೋಗಳ, ಪ್ರಸಿದ್ಧ ನಿರ್ದೇಶಕರ ಸಿನಿಮಾಗಳು ಬಿಡುಗಡೆ ಮುಂಚಿನ ವ್ಯಾಪಾರದಲ್ಲಿ ಹಣ ಮಾಡಿದರೂ ಪ್ರೇಕ್ಷಕರ ಮುಂದೆ ಸೋತಿದ್ದವು. ಜೋಗಯ್ಯ, ಪರಮಾತ್ಮ, ಜರಾಸಂಧ ಹೀಗೆ ಒಂದು ಸಾಲೇ ಇತ್ತು. ಚಿತ್ರವೊಂದರ ಬಿಡುಗಡೆಗೆ ಇಂಥಹ ಹದಗೊಂಡ ಸನ್ನಿವೇಷ ಸೃಷ್ಟಿಯಾಗೋದು ಅಪರೂಪ. ಗಣೇಶರ ‘ಶೈಲೂ’ ಜೊತೆಯಲ್ಲಿಯೇ ಬಿಡುಗಡೆಯಾಯಿತಾದರೂ ಎರಡೂ ಸಿನಿಮಾಗಳ ಚೌಕಟ್ಟು ಬೇರೆಯೇ ಇದ್ದ ಕಾರಣ ಒಂದಕ್ಕೊಂದು ಸ್ಪರ್ಧಿಗಳಾಗಲಿಲ್ಲ.

ಮುಂದೆ ಓದಿ >>

2011: ಐದು ಉತ್ತಮ ಚಿತ್ರಗಳು

೨೦೧೧ ರಲ್ಲಿ ತೆರೆಕಂಡ ಕನ್ನಡ ಚಿತ್ರಗಳಲ್ಲಿ ಐದು ಉತ್ತಮ ಚಿತ್ರಗಳು:

೫. ಮುರಳಿ ಮೀಟ್ಸ್ ಮೀರಾ: ಧಿಮಾಕು ಅನ್ನುವ ಒಳ್ಳೆಯ ಸಿನೆಮಾ ದಿಗ್ದರ್ಶಿಸಿಯೂ ಸೋತಿದ್ದ ಮಹೇಶ್ ರಾವ್ ನಿರ್ದೇಶನದ ಮುರಳಿ ಮೀಟ್ಸ್ ಮೀರಾ ಚಿತ್ರ ಅದರ ಸ್ಕ್ರೀನ್-ಪ್ಲೇ ಮತ್ತು ನಿರ್ವಹಣೆಯ ಕಾರಣಕ್ಕಾಗಿ ಇಷ್ಟವಾಗುತ್ತದೆ. ಪ್ರಜ್ವಲ್ ನಾಯಕನಾಗಿ ನಟಿಸಿದ ಈ ಚಿತ್ರ ಹಣ ಗಳಿಕೆಯಲ್ಲಿ ಎಡವಿದರೂ ಮಹೇಶ್ ರಾವ್ ಮುಂಬರುವ ದಿನಗಳಲ್ಲಿ ಅತ್ಯುತ್ತಮ ಚಿತ್ರಗಳನ್ನ ನೀಡುವ ಭರವಸೆ ಮೂಡಿಸಿದ್ದಾರೆ.

೪. ವಿಷ್ಣುವರ್ಧನ ಮತ್ತು ಸಾರಥಿ: ವಿಷ್ಣುವರ್ಧನ ಈ ವರ್ಷದ ಸ್ಟೈಲಿಷ್ ಕನ್ನಡ ಸಿನೆಮಾ. ಪಕ್ಕಾ ಸಿನೆಮಾ ಸರಕೊಂದು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಈ ಚಿತ್ರ ನಿಲ್ಲುತ್ತದೆ. ತೆಲುಗು ಫಾರ್ಮುಲಾವನ್ನು ಸಮರ್ಥವಾಗಿ ಬಳಸಿಕೊಂಡು ಕನ್ನಡದ್ದೇ ಆದ ಚಿತ್ರ ಕೊಟ್ಟಿದ್ದಾರೆ ನಿರ್ಮಾಪಕ ದ್ವಾರಕೀಶ್.

ಪಕ್ಕಾ ಮಸಾಲಾ ಚಿತ್ರವಾಗಿ ಸಾರಥಿ, ವರ್ಷದಲ್ಲಿ ಅತ್ಯಂತ ಹೆಚ್ಚು ಹಣ ಮಾಡಿದ ಸಿನೆಮಾ. ಕತೆ ಮತ್ತು ಮೇಕಿಂಗ್ ನಲ್ಲಿ ಮತ್ತದೇ ತೆಲುಗಿನ ನೆರಳಿದ್ದರೂ ಸದಾ ಸೋಲುವ ಭಯದಲ್ಲಿರುವ ಕನ್ನಡ ಚಿತ್ರ ನಿರ್ಮಾಪಕರಲ್ಲಿ ಭರವಸೆ ಮೂಡಿಸಿದ ಚಿತ್ರ. ಪರಿಣಾಮ ಇಂತಹದ್ದೇ ಸಾಲು ಸಾಲು ಚಿತ್ರಗಳನ್ನು ೨೦೧೨ ರಲ್ಲಿ ನಿರೀಕ್ಷಿಸಬಹುದಾಗಿದೆ.

೩. ಲೈಫು ಇಷ್ಟೇನೆ: ಮನಸಾರೆ ಮತ್ತು ಪಂಚರಂಗಿಯಲ್ಲಿ ಚಿತ್ರ ಕಥೆಗಾರನಾಗಿದ್ದ ಪವನ್ ನಿರ್ದೇಶನದ ಚೊಚ್ಚಲ ಚಿತ್ರ. ಪ್ರಸ್ತುತ ನಗರದ ಯುವ ಬದುಕನ್ನ ಹಸಿ ಹಸಿಯಾಗಿ ತೆರೆದಿಟ್ಟ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

ಮುಂದೆ ಓದಿ >>

ಇನ್ನಷ್ಟು ಲೇಖನಗಳು