ಚಿತ್ರ ವಿಮರ್ಶೆ • ಹೇಮಾ ಪವಾರ್ ತನ್ನ ಪೋಲಿ ಹುಡುಗಾಟಿಕೆಯ ಪ್ರೋಮೋಗಳಿಂದಲೇ ಜನಪ್ರಿಯತೆ ಗಳಿಸಿದ್ದ ತೀವ್ರ ನಿರೀಕ್ಷೆಯ ಚಿತ್ರ ಸಿದ್ಲಿಂಗು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. Stereotype ಸಿನಿಮಾಗಳಿಂದ ಬೇಸತ್ತ ಜನರಿಗೆ ಒಂದು ಸಾಧಾರಣ ಕತೆಯನ್ನು ವಿಭಿನ್ನವಾಗಿ ಹೇಳಲಾಗಿರುವ ಕನ್ನಡದ ಚಿತ್ರಗಳಲ್ಲೊಂದು. ಕತೆಯ ಮಾದರಿಯಿಂದ ಹಿಡಿದು, ನಿರೂಪಣೆ, ಸಂಭಾಷಣೆ ಹಾಗು ನಟನೆಯಲ್ಲೂ ಕೂಡ ಹೊಸತನ್ನು ಹೊತ್ತು ತಂದಿರುವಂತಹ ಚಿತ್ರವೂ ಹೌದು. ಚಿತ್ರದ ಕತೆಯನ್ನು ನಾಯಕ narrate ಮಾಡುತ್ತ ಹೋಗುತ್ತಾನೆ, ಆತ ಹುಟ್ಟಿದ್ದು, ಆತನ ಅಪ್ಪ ಚಿಕ್ಕಮ್ಮ, ಸ್ಕೂಲು, ಸ್ಕೂಲಿನ ಗೆಳತಿ, ಕಾರಿನ ಬಗ್ಗೆ ಆತನಿಗೆ ವ್ಯಾಮೋಹ ಬೆಳೆದು ಬಂದ ರೀತಿ. ಕಾರಿದ್ದದ್ದಕ್ಕೆ ಹತ್ತಿರವಾದ ಲೆಕ್ಚರರ್, ಸಲೀಸಾಗಿ ಎಂಬಂತೆ ಆಕೆಯೊಂದಿಗೆ ಕಾರಿನಲ್ಲೇ ನಡೆದು ಹೋಗುವ ದೈಹಿಕ ಸಂಪರ್ಕ, ಹಠಾತ್ತನೆ ಸತ್ತು ಹೋಗುವ ಅಪ್ಪ ಅಮ್ಮ, ಒಂಟಿಯಾಗಿ ಬೆಳೆಯುವ ಆತ, ಕಾರು ಕೊಳ್ಳಬೇಕೆಂಬ ಆತನ ಕನಸು, ಕಾರ್ ಮಾಲೀಕನ ಒಂದಷ್ಟು ಎಮೋಷನ್ಸು, ಬಡ್ಡಿಗೆ ದುಡ್ಡು ಕೊಡುವ ವ್ಯಾಪಾರಿ, ಅದರಿಂದ ಪರಿಚಯವಾಗುವ ನಾಯಕಿ, ಆಕೆಯೊಂದಿಗಿರುವ ಆಯಾ, ಧಿಡೀರ್ ಎಂದು ಮತ್ತೆ ಕಾಣಿಸಿಕೊಳ್ಳುವ ಲೆಕ್ಚರರ್ ’ತುರುವೇಕೆರೆ ಆಂಡಾಳಮ್ಮ’, ಆಕೆಯನ್ನು ನೋಡಿ ಕಾರಿನ ದಾಖಲೆಗಳನ್ನು ಕಳೆದುಕೊಳ್ಳುವ ನಾಯಕ, ಕಾರ್ ಮಾಲೀಕನ ಮಗನ ವಿಲನ್ ರೂಪದ ಎಂಟ್ರಿ, ಆತನಿಗೊಬ್ಬ ಇನ್ಸ್ ಪೆಕ್ಟರ್ ಶತ್ರು, ಇನ್ಸ್ ಪೆಕ್ಟರ್ ಗೆ ಹತ್ತಿರವಾಗುವ ಸಿದ್ಲಿಂಗು ಮತ್ತು ನಾಯಕಿ, ಕ್ಲೈಮ್ಯಾಕ್ಸ್ ನಲ್ಲಿ ವೈರಿ ನಾಶಕ್ಕಾಗಿ ಇನ್ಸ್ ಪೆಕ್ಟರ್ ಹಾಗು ಸಿದ್ಲಿಂಗು ಹೊಡೆದಾಡಬೇಕಾದರೆ, ಅಚಾತುರ್ಯದಿಂದ ಸತ್ತು ಹೋಗುವ ನಾಯಕಿ. ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರನ್ನು ದಿಗ್ಬ್ರಮಿಸಲೆಂದೇ ಮೂಡಿಸಿರುವುದು ತಿಳಿದರು ಇಡೀ ಕತೆ ಹಾಗು ಅದರ ರೀತಿ ಕ್ಲೈಮ್ಯಾಕ್ಸನ್ನು ಜಸ್ಟಿಫೈ ಮಾಡುವುದಿಲ್ಲ. ಹಾಗಾಗಿ ಅದು ಅಲ್ಟಿಮೇಟ್ ಶಾಕ್ ಎನಿಸದೆ ಅತೀ ಭಾವುಕವೂ ಎನಿಸದೆ ಪ್ರೇಕ್ಷಕರ ಮನಸ್ಸಿನಲ್ಲಿ ನಿಲ್ಲಲು ಸೋಲುತ್ತದೆ.
ಮುಂದೆ ಓದಿ >> ರಂಗಭೂಮಿ • ಉಷಾ ಕಟ್ಟೆಮನೆ ಇತಿಹಾಸದ ಘಟನೆಯೊಂದನ್ನು ವರ್ತಮಾನದಲ್ಲಿ ನಿಂತು ನೋಡುವ ಪ್ರಯತ್ನವೇ ’ಪಿನಾಕಿನೀ ತೀರದಲ್ಲಿ’ ಈ ನಾಟಕವನ್ನು ಕೆ.ಜಿ.ಎಫ್ ಸಮುದಾಯ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು.
ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ತೀರದಲ್ಲಿದೆ ವಿದುರಾಶ್ವತ್ಥ. ಮಹಾಭಾರತದ ವಿದುರನ ಹೆಸರಿನೊಂದಿಗೆ ತಳುಕು ಹಾಕಿಕೊಂದಿರುವ ಇಲ್ಲಿರುವ ಅರಳಿ ಮರದ ಕೆಳಗೆ ಸಾವಿರಾರು ನಾಗರ ಕಲ್ಲುಗಳಿವೆ. ಇದೊಂದು ಭಕ್ತರ ಆರಾಧನಾ ಕ್ಷೇತ್ರ. ಆದರೆ ಈ ಜಾಗ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು ಎಂಬುದು ಬಹಳ ಜನಕ್ಕೆ ಗೊತ್ತಿದ್ದಂತಿಲ್ಲ.
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನಡೆದ ಧ್ವಜ ಸತ್ಯಾಗ್ರ್ಹ ಚಳುವಳಿ ಮತ್ತು ಅದರಲ್ಲಿ ಹುತಾತ್ಮರಾದವರ ಇತಿಹಾಸ ವಿದುರಾಶ್ವತ್ಥದೊಂದಿಗೆ ಸೇರಿಕೊಂಡಿದೆ. ಇದನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ.
ಮುಂದೆ ಓದಿ >> ಪ್ರಚಲಿತ • ರವಿ ಕೃಷ್ಣ ಆರ್ (ಕನ್ನಡ ಮನಸ್ಸಿನ ಯುವ ಚಿಂತಕ, ಬರಹಗಾರ, ಒಳ್ಳೆಯ ಗೆಳೆಯರೂ ಆದ ರವಿಕೃಷ್ಣಾ ರೆಡ್ಡಿ ೨೦೦೭ರ ಸೆಪ್ಟಂಬರ್‌ನಲ್ಲಿ ಬರೆದ ಈ ಲೇಖನವನ್ನು ಪ್ರಸ್ತುತವೆನಿಸುವ ಅದರ ಆಶಯ ಗುಣಗಳನ್ನು ಓದುಗರಿಗೆ ವರ್ಗಾಯಿಸುವ ಯೋಚನೆಯಿಂದ ಇಲ್ಲಿ ಯಥಾವತ್ತಾಗಿ ಮರು ಪ್ರಕಟಿಸಲಾಗಿದೆ. ಈಗಿನ ಚಿತ್ರ-ಕಾಲಕ್ಕೂ ಲೇಖನದ ವಿಷಯಗಳು ಪ್ರಸ್ತುತವಾಗುವುದು ಆಶ್ಚರ್ಯವೆನಿಸಿದರೂ ನಿಜ. ಮರು ಪ್ರಕಟಣೆಗೆ ಅನುಮತಿ ನೀಡಿದ ಅವರಿಗೆ ಧನ್ಯವಾದಗಳು -ಸಂ)
ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ, ಎನ್ನುವ ವಿಷ್ಣುವರ್ಧನ್‌ರಂತಹ ಪ್ರತಿಭಾಶಾಲಿ, ಕನ್ನಡದ ಈಗಿನ ನಂಬರ್ ಒನ್ ನಟ ಅಪರೂಪಕ್ಕೊಮ್ಮೆ ಸಿಕ್ಕಿದ ಪಾತ್ರದಲ್ಲಿ ತಮ್ಮ ಇಮೇಜು, ಇಸಮುಗಳನ್ನೆಲ್ಲ ಬಿಟ್ಟು ನಟಿಸಲಾಗಲಿಲ್ಲ ಅಂದರೆ ಅದು ಯಾರ ದೌರ್ಭ್ಯಾಗ್ಯ, ಯಾರ ದೌರ್ಬಲ್ಯ? ದೆಹಲಿಯಲ್ಲಿ ಶಾರುಖ್ ಯಾವುದೆ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಬಣ್ಣಗೆಟ್ಟ ಮನೆಯತ್ತ ಸ್ಕೂಟರ್ ತಳ್ಳುತ್ತ ನಟಿಸುತ್ತಿರುವಾಗ ನಮ್ಮಲ್ಲಿನ ಹಿರಿಯರಿಗೆ ರೈತನ ಪಾತ್ರದಲ್ಲೂ ಸೆಕ್ಸಿಯಾಗಿ ಕಾಣುವ ಹಂಬಲ!
ಮುಂದೆ ಓದಿ >> |
ಚಿತ್ರ ವಿಮರ್ಶೆ • ಮಹೇಶ್ ಮಲ್ನಾಡ್ ಕನ್ನಡದಲ್ಲಿ ಡಬ್ಬಿಂಗ್ ಚಿತ್ರಕ್ಕೆ ಅವಕಾಶ ನೀಡದಿರುವುದು ಒಳ್ಳೆಯದೇ ಆಯ್ತು. `ಶಟರ್ ಐಲ್ಯಾಂಡ್’ ಎಂಬ ಚಿತ್ರ, ಕನ್ನಡ ಚಿತ್ರಗಳ ಪ್ರೇಕ್ಷಕರಿಗೆ ಡಬ್ ಚಿತ್ರವಾಗಿ ನೋಡುವ ಅವಕಾಶ ಇದ್ದಿದ್ದರೆ.. ಉಪೇಂದ್ರ ಅಭಿನಯದ ‘ಆರಕ್ಷಕ’ ಚಿತ್ರಕ್ಕೆ ಕಾಸು ಹುಟ್ಟೋದು ಕಷ್ಟವಿತ್ತೇನೋ. ಆಪ್ತಮಿತ್ರ, ಆಪ್ತರಕ್ಷಕ ಖ್ಯಾತಿಯ ಪಿ ವಾಸು ಕಥೆ, ಚಿತ್ರಕಥೆ ನಿರ್ದೇಶನವಿರುವ ಆರಕ್ಷಕ ಚಿತ್ರ ಲಿಯಾನಾರ್ಡೊ ಡಿಕಾಪ್ರಿಯೋ ಅಭಿನಯದ ‘ಶಟರ್ ಐಲ್ಯಾಂಡ್’ ಚಿತ್ರ ಅಥವಾ ‘ಡೆನ್ ಲೆಹಾನೆ’ ಬರೆದ ಕಾದಂಬರಿಯೊಂದರ ಆಧಾರಿತ ಇರಬಹುದು.
ಆದರೆ, ಕನ್ನಡದ ಮಟ್ಟಿಗೆ ಉತ್ತಮ ಗುಣಮಟ್ಟದ ಕಥೆಯಾಧಾರಿತ ಚಿತ್ರ ಬಂದಿರುವುದು ಸ್ವಾಗತಾರ್ಹ. ತುಂಬಾ ದಿನದಿಂದ ಉಪೇಂದ್ರ ಶೈಲಿಯ ಚಿತ್ರಗಳ ದಾಹದಿಂದ ಬಳಲಿದ್ದ ಪ್ರೇಕ್ಷಕರಿಗೆ ಅಮೃತಕೊಟ್ಟರೂ ಒಂದೇ, ಬಿಸ್ಲೇರಿ ನೀರು ಕೊಟ್ಟರೂ ಒಂದೇ. ಒಟ್ಟಿನಲ್ಲಿ ದಾಹ ಇಂಗುವುದು ಮುಖ್ಯ. ಪ್ರೇಕ್ಷಕರ ಪರಿಸ್ಥಿತಿ ಅರಿತು ಅಗತ್ಯಕ್ಕೆ ತಕ್ಕಂತೆ ದಾಹ ನೀಗಿಸಿದ್ದಾರೆ ವಾಸು. ಕೊಟ್ಟ ಕಾಸಿಗೆ ಮೋಸವಂತೂ ಆಗಲ್ಲ. ಮೋಸವಾಯಿತು ಎಂದುಕೊಂಡರೆ ಅದು ಅವರ ತಪ್ಪಲ್ಲ. ಚಿತ್ರದ ಪೋಸ್ಟರ್ ನಲ್ಲಿ ಇದು 2 ಡಿ, 3ಡಿ ಚಿತ್ರ ಎಂದು ಹಾಕಿಲ್ಲ.
ಮುಂದೆ ಓದಿ >> ಚಿತ್ರ ವಿಮರ್ಶೆ • ಇಂಚರ ಸಿದ್ಲಿಂಗು - ಉದ್ದದ ಕಥೆ. ಆತನ ಹುಟ್ಟಿನಿಂದ ಶುರುವಾಗುವ ಕಥೆ. ಹುಟ್ಟುತ್ತಲೇ ಅಮ್ಮನನ್ನು ಕಳೆದುಕೊಂಡು ಅನಾಥನಾಗುವ ಸಿದ್ಲಿಂಗು. ಮಾಮೂಲೀ ಕಥೆಗಳಲ್ಲಿನ ಮಲತಾಯಿಯಂತಲ್ಲದೆ, ಅಪ್ಪನ ಪ್ರೇಯಸಿ, ಅಮ್ಮನೇ ಆಗುತ್ತಾಳೆ. ಆದರೂ ಮಗು ಸಿದ್ಲಿಂಗು ಅಳು ನಿಲ್ಲಿಸುವುದು ಈ ಹೊಸ ಅಮ್ಮ ಕೈಗೆ ‘ಕಾರ್’ ಗೊಂಬೆಯನ್ನಿತ್ತಾಗ. ಅಂದಿನಿಂದ ‘ಕಾರ್’ ಅನ್ನು ಪಡೆಯುವುದು ಆತನ ಕನಸಾಗಿಬಿಡುತ್ತದೆ. ಆ ಕನಸನ್ನು ಅಪ್ಪ, ಅಮ್ಮ ಇಬ್ಬರೂ ಕೂಡ ಪೋಷಿಸುತ್ತಾರೆ. ಒಟ್ಟಿನಲ್ಲಿ ಸಿದ್ಲಿಂಗುಗೆ ಹುಟ್ಟಿನಿಂದಲೂ ಅತಿಯಾದ ಕಾರಿನ ಹುಚ್ಚು! ಆತ ಅತಿಯಾಗಿ ದ್ವೇಷಿಸುತ್ತಿದ್ದ ಸಹಪಾಠಿ ಕೂಡ ಆಕೆಯ ತಂದೆ ‘ಕಾರ್’ ಕೊಂಡಾಕ್ಷಣ ಪ್ರೀತಿಯ ಗೆಳತಿಯಾಗಿಬಿಡುತ್ತಾಳೆ. ಒಂಟಿ ಲೆಕ್ಚರರ್ ಳಿಗೆ ಈತ ಜೊತೆಯಾಗುವುದು ಕೂಡ ಆಕೆಯ ಬಳಿ ಕಾರ್ ಇದೆಯೆಂದೇ! ಲೆಕ್ಚರರ್ ಳಿಗೆ ನಿಮ್ಮ ‘ಕಾರ್’ ಹಾಗೂ ‘ಎದೆ’ ಇಷ್ಟ ಎಂದು ಹೇಳಿ ಓಡಿಹೋದವನು ಆಕೆಯ ‘ಕಾರ್’ ನನ್ನು ಮರೆಯಲಾಗದೆ ಕ್ಷಮೆ ಕೇಳುತ್ತಾ ವಾಪಾಸಾಗುತ್ತಾನೆ. ಸೋಗು ಹಾಕಿಕೊಂಡು ಬದುಕುವವರಿಗಿಂತ, ಈತನೇ ವಾಸಿ ಎಂದು ಇನ್ನಷ್ಟು ಹತ್ತಿರವಾಗುವ, ಗಂಡನಿಂದ ದೂರವಾಗಿರುವ ಲೆಕ್ಚರರ್ ಗೆ, ಸಿದ್ಲಿಂಗುವಿನ ತರಹವೇ ರೈಲಿನ ಹುಚ್ಚು! ಅವಳ ಒಂಟಿತನವನ್ನು ಅರ್ಥ ಮಾಡಿಕೊಳ್ಳುವ ಸಿದ್ಲಿಂಗು, ಈ ಇಬ್ಬರ ನಡುವಿನ ಒಡನಾಟ, ಬಾಂಧವ್ಯ ಬೆಳೆದು, ಅಕಸ್ಮಾತ್ತಾಗಿ ದೇಹವು ಕೂಡ ಬೆರೆಯುತ್ತದೆ. ಮುಂದೆ ಓದಿ >> ಚಿತ್ರ ವಿಮರ್ಶೆ • ಪುಂಡಲೀಕ ಕನ್ನಡವೂ ಸೇರಿದಂತೆ ಭಾರತೀಯ ಮುಖ್ಯವಾಹಿನಿಯ ಸಿನೆಮಾಗಳಲ್ಲಿ ಪ್ರೇಮವೂ ಸೇರಿದಂತೆ ಯಾವುದೇ ಸಂಬಂಧಗಳು ಹುಟ್ಟಿ ಬೆಳೆಯುವುದಿಲ್ಲ. ಬದಲಿಗೆ ನಿಂತಲ್ಲೇ ನಿಂತಿರುತ್ತವೆ. ಅಣ್ಣ-ತಂಗಿಯಾಗಿರಬಹುದು, ಪ್ರೇಮಿಗಳಾಗಿರಬಹುದು, ಸ್ನೇಹಿತರಾಗಿರಬಹುದು ಯಾವೊಂದು ಸಂಬಂಧವೂ ಹುಟ್ಟುವ ಪ್ರಕ್ರಿಯೆಯ ಬಗ್ಗೆ ನಮ್ಮ ಸಿನೆಮಾಗಳು ಗಂಭೀರವಾಗಿ ಪರಿಗಣಿಸಿಲ್ಲ. ಕೆಲವೊಂದು ಕಡೆ ಈ ಸಂಬಂಧಗಳು ಹುಟ್ಟುವ ಪ್ರಕ್ರಿಯೆ ಕೂಡ ನಾಮಕಾವಸ್ಥೆಗೆ ಎಂಬಂತಿರುತ್ತವೆ.
ಸಿದ್ಲಿಂಗು ಸಿನೆಮಾ ಮುಖ್ಯವಾಗುವುದು ಆ ಚಿತ್ರದೊಳಗಿನ ಸಂಬಂಧಗಳು ಹುಟ್ಟಿಕೊಳ್ಳುವ ಸಹಜತೆಯಿಂದ. ಮನುಷ್ಯ ಸಂಬಂಧಗಳ ಹುಟ್ಟು ಆಕಸ್ಮಿಕವೂ, ಕೌತುಕವೂ ಆದ ಸಂಗತಿ. ಅದು ಹುಟ್ಟಿದ ಗಳಿಗೆಗಳನ್ನು ನಮ್ಮ ನಮ್ಮ ಬದುಕಿನಲ್ಲಿ ನೆನೆಸಿಕೊಂಡರೂ ಸಾಕು, ಅದರ ರಸವತ್ತತೆ ನಮಗೆ ಅರ್ಥವಾದೀತು.
ಸಿದ್ಲಿಂಗು ಎಂಬ ಹುಡುಗನ ಬದುಕಿನಲ್ಲೂ ಇಂತಹ ಸಂಬಂಧಗಳು ಹುಟ್ಟುತ್ತವೆ. ಕಳಚಿಕೊಳ್ಳುತ್ತವೆ. ಕಾರು ಕೊಳ್ಳಬೇಕೆಂಬ ಈತನ ಆಸೆಯೊಂದು ಈ ಪಡೆಯುವ-ಕಳೆದುಕೊಳ್ಳುವ ಪ್ರಕ್ರಿಯೆಗೆ ನೆಪವಾಗಿ ಬರುತ್ತದೆ.
ಕನ್ನಡ ಜನಪ್ರಿಯ ಸಿದ್ದ ಮಾದರಿಗಳನ್ನು ತಕ್ಕ ಮಟ್ಟಿಗೆ ಧಿಕ್ಕರಿಸಿ ತನ್ನದೇ ಹಾದಿಯಲ್ಲಿ ನಡೆಯುವ ಸಿದ್ಲಿಂಗು ಚಿತ್ರ ಅದೇ ಕಾರಣಕ್ಕೇ ವಿಭಿನ್ನವೂ ಎನಿಸಿಕೊಳ್ಳುತ್ತದೆ.
ಮುಂದೆ ಓದಿ >> |