ದೃಶ್ಯಕ್ಕೊಂದು ನುಡಿಗಟ್ಟು

ನಮ್ಮ ಟೀಮ್



shekharpoorna

ಶೇಖರ್‌ಪೂರ್ಣ


ಕನ್ನಡಸಾಹಿತ್ಯ ಡಾಟ್ ಕಾಂ ನ ಸಂಸ್ಥಾಪಕರು ಮತ್ತು ಸಂಪಾದಕರು. ಸಂವಾದ ಡಾಟ್ ಕಾಂ ಗೆ ಮಾರ್ಗದರ್ಶಕರು. ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ನಲ್ಲಿ ವೃತ್ತಿ ಬದುಕು ನಡೆಸಿ ಸದ್ಯ ನಿವೃತ್ತರಾಗಿದ್ದಾರೆ. ಅವರ ಬಗ್ಗೆ ಅವರು ಹೇಳುವುದಿಷ್ಟು "ಜಾಗತೀಕರಣ-ಮಾಹಿತಿ ತಂತ್ರಜ್ಞಾನದ ಪರಿಣಾಮ, ದುಷ್ಪರಿಣಾಮಗಳೆರಡೂ ಕಳೆದ ಕೆಲವು ವರ್ಷಗಳಿಂದ ನನ್ನ ಮನಸ್ಸು-ಮೆದುಳನ್ನು ಆಕ್ರಮಿಸಿರುವ ವಿಷಯಗಳು. ಮೂಡಿ ಬರುವ ಭಾವ-ಚಿಂತನೆಗನುಗುಣವಾಗಿ ನನ್ನ ಇತಿ ಮಿತಿಯಲ್ಲಿ ಕಾರ್ಯಶೀಲನಾಗಿದ್ದೇನೆ. ಕನ್ನಡಸಾಹಿತ್ಯ ಡಾಟ್ ಕಾಂ, ಸಂವಾದ ಡಾಟ್ ಕಾಂ ಹಾಗು ಇವುಗಳ ಸುತ್ತಲೂ ಇರುವ ಅಪಾರವಾದ ಬೆಂಬಲಿಗರ ಬಳಗ ನನ್ನ ಆಸ್ತಿ" ಎನ್ನುತ್ತಾರೆ.




ravi arehalli

ರವಿ ಅರೇಹಳ್ಳಿ


ರವಿ ಅರೇಹಳ್ಳಿ, ಮೂಲತಃ ತುಮಕೂರಿನ ಅರೇಹಳ್ಳಿಯವರು. ಒಂದು ಅಮೇರಿಕನ್ ಸಾಫ್ಟ್‌ವೇರ್ ಜಾಯಿಂಟ್‌ನಲ್ಲಿ ಉದ್ಯೋಗ. ಸಂವಾದ ಡಾಟ್ ಕಾಂನ ಯೋಜನಾ ನಿರ್ದೇಶಕರು.




raghava kotekar

ರಾಘವ ಕೋಟೆಕರ್


ರಾಘವ ಕೋಟೆಕರ್, ದಾವಣಗೆರೆಯವರು. ನೋಕಿಯಾದಲ್ಲಿ ಉದ್ಯೋಗಿ. ಸದ್ಯ ಅಮೆರಿಕಾ ನಿವಾಸಿ. ಸಂವಾದ ಡಾಟ್ ಕಾಂ ಅಂತರ್ಜಾಲ ತಾಣದ ಅಭಿವೃದ್ಧಿ, ನಿರ್ವಹಣೆ ಇವರದ್ದೇ.




kiran m

ಕಿರಣ್ ಎಂ


ಕಿರಣ್, ಶಿವಮೊಗ್ಗ ಜಿಲ್ಲೆ ಸಾಗರದವರು. ಇಂಡಿಯಾ ಇನ್‌ಫೋಲೈನ್‌ನಲ್ಲಿ ಉದ್ಯೋಗಿ. ಸಂವಾದ ಡಾಟ್ ಕಾಂನ ಸಂಪಾದಕೀಯ ಬಳಗದ ನಿರ್ವಾಹಕರು.




pramod p t

ಪ್ರಮೋದ್ ಪಿ ಟಿ


ಪ್ರಮೋದ್, ಉತ್ತರ ಕನ್ನಡದ ಕುಮಟಾದವರು. ವಿಜ್ಞಾನ್ ಟೆಕ್ನಾಲಜೀಸ್‌ನಲ್ಲಿ ಉದ್ಯೋಗ. ಹವ್ಯಾಸಿ ಚಿತ್ರ ಕಲಾವಿದ. ಸಂವಾದ ಡಾಟ್ ಕಾಂನ ಕಲಾವಿಭಾಗದ ನಿರ್ವಾಹಕರು.




rudramurthy

ರುದ್ರಮೂರ್ತಿ


ರುದ್ರಮೂರ್ತಿ, ನೆಲಮಂಗಲದವರು. ಎಪಿಯನ್ಸ್ ಸಾಫ್ಟ್‌ವೇರ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ನಿರ್ದೇಶಕರು. ಸಂವಾದ ಡಾಟ್ ಕಾಂನ ತಾಂತ್ರಿಕ ತಂಡದ ಸಂಚಾಲಕರು. ಸಂವಾದ ಡಾಟ್ ಕಾಂನ ಪರಿಕಲ್ಪನೆಗಳ ಉಸ್ತುವಾರಿ.







hema powar

ಹೇಮಾ ಪವಾರ್


ಹೇಮಾ, ಬೆಂಗಳೂರಿನವರು. ಕಂಪನಿಯೊಂದರ ಮಾನವ ಸಂಪನ್ಮೊಲ ವಿಭಾಗದಲ್ಲಿ ಉದ್ಯೋಗಿ. ಹವ್ಯಾಸಿ ಬರಹಗಾರ್ತಿ, ಸಿನಿಮಾ ಆಸಕ್ತೆ. ಸಂವಾದ ಡಾಟ್ ಕಾಂನ ಸಂಪಾದಕೀಯ ಬಳಗದ ಸದಸ್ಯೆ.

ಇನ್ನಷ್ಟು ಲೇಖನಗಳು